

ಧಾರವಾಡ: ಧಾರವಾಡ ಸಾಂಸ್ಕೃತಿಕ ನಗರವಾದರೆ, ಕಿತ್ತೂರು ಐತಿಹಾಸಿಕ ನಗರ. ಕಿತ್ತೂರಿಗೂ ಧಾರವಾಡಕ್ಕೂ ಅವಿನಾಭಾವ ಸಂಬಂಧವಿದೆ. ಕಿತ್ತೂರು ಸಂಸ್ಥಾನದ ದಾಖಲೆಗಳು ಅತ್ಯದ್ಭುತವಾಗಿವೆ. ಹಲವು ಯೋಜನೆಗಳ ಪ್ರತೀಕವಾಗಿರುವ ಡಾ. ಎಂ.ಎಂ. ಕಲಬುರ್ಗಿ ಅವರು, ಕಿತ್ತೂರ ಸಂಸ್ಥಾನದ ದಾಖಲೆಗಳ ಕೃತಿಯ ಯೋಜನೆ ರೂಪಿಸಿ ಇತಿಹಾಸ ಹೊರತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಸಾಹಿತಿ ಡಾ. ಗುರುಲಿಂಗ ಕಾಪಸೆ ಹೇಳಿದರು.
ಬೆಳಗಾವಿಯ ಬಸವರಾಜ ಕಟ್ಟಿಮನಿ ಪ್ರತಿಷ್ಠಾನ ಮತ್ತು ಕರ್ನಾಟಕ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಕಿತ್ತೂರು ಸಂಸ್ಥಾನ: ದಾಖಲೆಗಳು ಸಂಪುಟ-1’ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಡಾ. ಅಶೋಕ ಶೆಟ್ಟರ್, ಐಸಿಎಚ್ಆರ್ ದಕ್ಷಿಣ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಾ. ಎಸ್. ಕೆ. ಅರುಣಿ ಕೃತಿ ಕುರಿತು ಮಾತನಾಡಿದರು. ಸಂಪಾದಕ ಡಾ. ಎ. ಬಿ. ವಗ್ಗರ ಮಾತನಾಡಿದರು. ಪ್ರೊ. ಮಲ್ಲಿಕಾರ್ಜುನ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಶಿವಣ್ಣ ಬೆಲ್ಲದ, ಪ್ರಕಾಶ ಎಸ್. ಉಡಿಕೇರಿ, ವೆಂಕಟೇಶ ಮಾಚಕನೂರ, ಸಿ.ವಿ. ಯರವಿನತಲಿಮಠ, ಸ್ಮಿತಾ ಸುರೇಬಾನಕರ, ಅಮರೇಶ ಯತಗಲ್ಲ, ಡಾ. ದೀಪಕ ಆಲೂರ, ಎನ್. ಆರ್. ಬಾಳಿಕಾಯಿ, ಶಿವಾನಂದ ತರ್ಲಗಟ್ಟಿ, ಬಿ. ಎಸ್. ಶಿರೋಳ, ಜಿ. ಬಿ. ಹೊಂಬಳ, ಡಾ. ಸುರೇಶ ಹೊರಕೇರಿ, ಇತರರು ಇದ್ದರು. ವಿದ್ಯಾ ಭಜಂತ್ರಿ ಸ್ವಾಗತಿಸಿದರು. ಡಾ. ಎಂ. ವೈ. ಸಾವಂತ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಹನುಮಂತ ಮೇಲಿನಮನಿ ನಿರೂಪಿಸಿದರು.