

ವಿಜಯವಾಣಿ ಸುದ್ದಿಜಾಲ ಗದಗ
ಚನ್ನಮ್ಮನ ಕಿತ್ತೂರ ಉತ್ಸವದ ಅಂಗವಾಗಿ ಜಿಲ್ಲೆಗೆ ಆಗಮಿಸಿದ ಕಿತ್ತೂರ ಚನ್ನಮ್ಮ ವಿಜಯೋತ್ಸವದ ವಿಜಯ ಜ್ಯೋತಿಗೆ ಬುಧವಾರ ನಗರದ ಪ್ರವಾಸಿ ಮಂದಿರದಲ್ಲಿ ಬೀಳ್ಕೊಡಲಾಯಿತು.
ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಅವರು ಚನ್ನಮ್ಮಾಜಿ ವಿಜಯ ಜ್ಯೋತಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾ„ಕಾರದ ಅಧ್ಯಕ್ಷ ಸಿದ್ದಪ್ಪ ಪಲ್ಲೇದ, ಅಪರ ಜಿಲ್ಲಾ„ಕಾರಿ ಎಂ.ಪಿ.ಮಾರುತಿ, ಉಪವಿಭಾಗಾಧಿಕಾರಿ ಅನ್ನಪೂರ್ಣ, ತಹಸೀಲ್ದಾರ ಕಿಶನ ಕಲಾಲ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ ಸೇರಿದಂತೆ ಚನ್ನಮ್ಮಾಜಿ ಅಭಿಮಾನಿಗಳು, ಸಾರ್ವಜನಿಕರು ಇದ್ದರು.
ಜಾನಪದ ಕಲಾ ತಂಡಗಳೊಂದಿಗೆ ಕಿತ್ತೂರ ಚನ್ನಮ್ಮಾಜಿ ವಿಜಯ ಜ್ಯೋತಿಯು ಲಕ್ಕುಂಡಿ, ಬನ್ನಿಕೊಪ್ಪ ಮಾರ್ಗವಾಗಿ ಕೊಪ್ಪಳ ಜಿಲ್ಲೆಗೆ ಪ್ರಯಾಣ ಬೆಳೆಸಿತು.
ಅ. 23ರಿಂದ ಆರಂಭವಾಗುವ ಕಿತ್ತೂರ ಉತ್ಸವದ ಅಂಗವಾಗಿ ಕಿತ್ತೂರ ಚನ್ನಮ್ಮಾಜಿ ವಿಜಯೋತ್ಸವದ ವಿಜಯ ಯಾತ್ರೆ ಜ್ಯೋತಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನ ವಿಧಾನಸೌಧದಲ್ಲಿ ಅ. 2ರಂದು ಚಾಲನೆ ನೀಡಿದ್ದರು. ಈ ವಿಜಯ ಜ್ಯೋತಿಯು ರಾಜ್ಯಾದ್ಯಂತ ಸಂಚರಿಸಿ ಅ. 23ರಂದು ಬೆಳಗಾವಿ ಜಿಲ್ಲೆಯ ಕಿತ್ತೂರ ತಲುಪಲಿದೆ.