ಕಿಡ್ನಿ ವೈಫಲ್ಯ ಉಚಿತ ಚಿಕಿತ್ಸೆ ಭರವಸೆ

20230923_140558
Published on

ಯಾದಗಿರಿ: ಗುರುಮಠಕಲ್ ಕ್ಷೇತ್ರದ ಮಸ್ಲೆಪಲ್ಲಿ ಗ್ರಾಮದ ಯುವಕ ಲಕ್ಷ್ಮಣ ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಆಥರ್ಿಕ ಸಂಕಷ್ಟದಿಂದ ತೊಂದರೆ ಎದುರಿಸುತ್ತಿದ್ದೇವೆ ಎಂದು ಆತನ ಸಹೋದರಿ ಲಕ್ಷ್ಮೀ ಶಾಸಕ ಶರಣಗೌಡ ಕಂದಕೂರ ಬಳಿ ಅಳಲು ತೋಡಿಕೊಂಡರು.

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಲಕ್ಷ್ಮಣನಿಗೆ ಸರಕಾರಿ ವೆಚ್ಚದಲ್ಲಿ ಚಿಕಿತ್ಸೆ ಕೊಡಿಸಲಾಗುವುದು. ಅಲ್ಲದೆ, ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ವೈದ್ಯಕೀಯ ವೆಚ್ಛ ಭರಿಸಲಾಗುವುದು ಎಂದು ಕಂದಕೂರ ಧೈರ್ಯ ತುಂಬಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net