ಕಿಡ್ನಿ ರಕ್ಷಣೆಗೆ ನಿಯಮಿತ ತಪಾಸಣೆ ಅಗತ್ಯ

Published on

ಸಿದ್ಧಗಂಗಾ ಆಸ್ಪತ್ರೆಯ ನೆಫ್ರಾಲಜಿ ವಿಭಾಗದ ಮುಖ್ಯಸ್ಥ ಡಾ.ಕುಶಾಲ್​ ಸಲಹೆ

ತುಮಕೂರು: ನಿಯಮಿತವಾದ ಕಿಡ್ನಿ ತಪಾಸಣೆ ಮಾಡಿಸುವುದರಿಂದ ಕಿಡ್ನಿ ಫೇಲ್ಯೂರ್​ ಸಂಭಾವ್ಯ ಅಪಾಯದಿಂದ ದೂರವಿರಬಹುದು ಸಿದ್ಧಗಂಗಾ ಸೂಪರ್​ ಸ್ಪೆಷಾಲಿಟಿ ಆಸ್ಪತ್ರೆಯ ನೆಫ್ರಾಲಜಿ ವಿಭಾಗದ ಮುಖ್ಯಸ್ಥ ಡಾ.ಕುಶಾಲ್​ ತಿಳಿಸಿದ್ದಾರೆ.

ವಿಶ್ವ ಕಿಡ್ನಿ ದಿನದ ಅಂಗವಾಗಿ ಮಾತನಾಡಿರುವ ಅವರು, ಕಿಡ್ನಿ ಸಮಸ್ಯೆಗಳು ಸಾಮಾನ್ಯವಾಗಿ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಹೃದ್ರೋಗ ಸಮಸ್ಯೆ, ಅನಿಯಂತ್ರಿತವಾಗಿ ಧೂಮಪಾನ ಹಾಗೂ ಮದ್ಯಪಾನ ಮಾಡುವವರು, ಮೂತ್ರಸೋಂಕು ಹಾಗೂ ಕಿಡ್ನಿಯಲ್ಲಿ ಕಲ್ಲು ಹೊಂದಿರುವ ಹಾಗೂ ನೋವು ನಿರೋಧಕ ಮಾತ್ರೆ ಸೇವಿಸುತ್ತಿರುವವರಿಗೆ ಸಂಭಾವ್ಯ ಕಿಡ್ನಿ ಸಮಸ್ಯೆ ಉಂಟಾಗುವ ಸಾಧ್ಯತೆಯಿದ್ದು, 25 ವರ್ಷ ಮೇಲ್ಪಟ್ಟವರು ಪ್ರತಿ ವರ್ಷ ಕಿಡ್ನಿ ತಪಾಸಣೆಗೆ ಒಳಾಗಾಗಬೇಕು ಎಂದು ಸಲಹೆ ನೀಡಿದ್ದಾರೆ.

ಪ್ರತಿ ವರ್ಷ ಮಾರ್ಚ್​ ತಿಂಗಳ ಎರಡನೇ ಗುರುವಾರ ವಿಶ್ವ ಕಿಡ್ನಿ ದಿನವನ್ನಾಗಿ ಆಚರಿಸಲಾಗುತ್ತದೆ. ಈ ವರ್ಷ ನಿಮ್ಮ ಕಿಡ್ನಿ ಜೋಪಾನವಾಗಿದೆಯೇ? ಕಿಡ್ನಿ ಸಮಸ್ಯೆ ಆರಂಭದಲ್ಲೆ ಪತ್ತೆಹಚ್ಚಿಕೊಂಡು, ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳಿ ಎನ್ನುವ ೂಷವಾಕ್ಯದೊಂದಿಗೆ ಆಚರಿಸುತ್ತಿದೆ. ಹಾಗಾಗಿ ಪ್ರತಿಯೊಬ್ಬರೂ ತಮ್ಮ ಮೂತ್ರಪಿಂಡದ ಕಾಳಜಿಗೆ ಮುಂದಾಗಬೇಕು ಎಂದು ತಿಳಿಸಿದ್ದಾರೆ.

ಪದೇಪದೆ ವಾಂತಿ ಮಾಡಿಕೊಳ್ಳುವುದು, ಮೂತ್ರದಲ್ಲಿ ನೊರೆ ಕಾಣಿಸಿಕೊಳ್ಳುವುದು, ತೀವ್ರತರ ಸುಸ್ತು, ನಿಶ್ಯಕ್ತಿ, ನಿದ್ರಾಹಿನತೆ, ಉಸಿರಾಟದಲ್ಲಿ ತೊಂದರೆ ಇವವರಿಗೆ ಕಿಡ್ನಿ ಸಮಸ್ಯೆಯ ಅಪಾಯ ಹೆಚ್ಚಿದ್ದು, ಇಂತಹ ಲಣವಿದ್ದರೆ ಕೂಡಲೇ ಹತ್ತಿರದ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಗಾಗಬೇಕು. ಕಿಡ್ನಿ ಸಮಸ್ಯೆಯಿಂದ ದೂರವಿರಬೇಕಾದರೆ ಪ್ರತಿದಿನ 2ರಿಂದ 3 ಲೀಟರ್​ ನೀರು ಕುಡಿಯುವುದು, ಬಿಪಿ ಹಾಗೂ ಶುಗರ್​ ನಿಯಂತ್ರಿಸಬೇಕು. ಧೂಮಪಾನ ಹಾಗೂ ಮದ್ಯಪಾನ ತ್ಯಜಿಸಬೇಕು. ನೋವು ನಿವಾರಕ ಮಾತ್ರೆಗಳಿಂದ ದೂರವಿರುವುದು ಹಾಗೂ ನಕಲಿ ನಾಟಿ ಔಷಧ ಬಳಸದಿರುವುದು ಸೇರಿದಂತೆ ಉತ್ತಮ ಜೀವನ ಹಾಗೂ ಕಡಿಮೆ ಉಪ್ಪುನ್ನ ಸೇವಿಸಿ, ತರಕಾರಿ ಹಾಗೂ ಹಣ್ಣಗಳನ್ನ ಒಳಗೊಂಡ ಆಹಾರ ಶೈಲಿ ರೂಢಿಸಿಕೊಂಡು ಕಿಡ್ನಿ ಸಮಸ್ಯೆಯಿಂದ ದೂರವಿರಬೇಕು ಎಂದು ಕರೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net