

ಹುಮನಾಬಾದ್: ಬಸವಕಲ್ಯಾಣ ತಾಲೂಕಿನ ಗುಣತೀರ್ಥವಾಡಿಯ ಯುವತಿಯನ್ನು ಅಪಹರಿಸಿ, ಭೀಕರವಾಗಿ ಕೊಲೆ ಮಾಡಿದ ಕಿಡಿಗೇಡಿಗಳನ್ನು ಗಲ್ಲು ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಪಟ್ಟಣದಲ್ಲಿ ಶುಕ್ರವಾರ ವಿವಿಧ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆಯಿತು.
ತಾಲೂಕು ಟೋಕರಿ ಕೋಲಿ, ಕಬ್ಬಲಿಗ, ಅಂಬಿಗರ ಚೌಡಯ್ಯಾ ಯುವಸೇನೆ ಹಾಗೂ ವಿವಿಧ ದಲಿತ, ಕನ್ನಡಪರ, ಹಿಂದುಪರ ಸಂಘಟನೆಗಳು ಜಂಟಿಯಾಗಿ ಆಶ್ರಯದಲ್ಲಿ ಬೈಹತ್ ಪ್ರತಿಭಟನೆ ನಡೆಸಲಾಯಿತು. ಶ್ರೀ ವೀರಭದ್ರೆಶ್ವರ ದೇವಸ್ಥಾನದಿಂದ ಬಸವೇಶ್ವರ ವೈತ್ತ, ಬಾಲಾಜಿ ಮಂದಿರ ಮೂಲಕ ಡಾ.ಅಂಬೇಡ್ಕರ್ ವೈತ್ತದವರೆಗೆ ರ್ಯಾಲಿ ನಡೆಸಿ, ಅಲ್ಲಿ ಮಾನವ ಸರಪಳಿ ನಿರ್ಮಿಸಿ, ಟೈರ್‍ಗಳಿಗೆ ಬೆಂಕಿ ಹಚ್ಚಿ ಅಕ್ರೋಶ ವ್ಯಕ್ತಡಿಸಿದರು.
ರಾಜ್ಯದಲ್ಲಿ ಇಂಥ ಕೃತ್ಯಗಳು ನಿರಂತರವಾಗಿ ನಡೆಯುತ್ತಿವೆ. ಇದನ್ನು ತಡೆಗಟ್ಟಲು ಕಠಿಣ ಕ್ರಮಕೈಗೊಳ್ಳಬೇಕು. ಕೊಲೆಯಾದ ಯುವತಿ ಕುಟುಂಬಕ್ಕೆ ನಿವೇಶನ ಜತೆಗೆ ಆರ್ಥಿಕ ನೆರವು ನೀಡಬೇಕು ಎಂದು ಆಗ್ರಹಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಮನವಿಪತ್ರವನ್ನು ತಹಸೀಲ್ದಾರ್ ಅಂಜುಮ್ ತಬಸುಮ್ ಅವರಿಗೆ ಸಲ್ಲಿಸಲಾಯಿತು.
ಶ್ರೀ ದತ್ತಾತ್ರೇಯ ಗೂರುಜಿ, ಮೀನುಗಾರಿಕೆ ಅಭಿವೈದ್ಧಿ ನಿಗಮದ ಅಧ್ಯಕ್ಷೆ ಮಾಲಾ ಬಿ.ನಾರಾಯಣರಾವ, ಡಿಸಿಸಿ ಬ್ಯಾಂಕ್ ಉಪಾಧ್ಯP್ಷÀ ಅಭಿಷೇಕ್ ಪಾಟೀಲ್, ಉದ್ಯಮಿ ಸಂತೋಷ ಪಾಟೀಲ್, ಪ್ರಮುಖರಾದ ಅವಿನಾಶ ಪೆÇೀಲದಾಸ್, ನಾಗಭೂಷಣ ಸಂಗಮಕರ್, ಶರಣಬಸಪ್ಪ ಎಖೇಳ್ಳಿ, ಲಕ್ಷ್ಮೀಪುತ್ರ ಮಾಳಗೆ, ನಾರಾಯಣರಾವ ಭಂಗಿ, ಜಗನ್ನಾಥ ಜಮಾದಾರ, ಬ್ಯಾಂಕ್‍ರಡ್ಡಿ, ಸುನೀಲ ಭಾವಿಕಟ್ಟಿ, ಗೌತಮ ಚವ್ಹಾಣ್, ಶಿವಕುಮಾರ ನಾಟೀಕಾರ, ಲಚ್ಚಪ್ಪ ಜಮಾದಾರ, ವಿಜಯಕುಮಾರ ಪಾಟೀಲ್, ರಾಜಣ್ಣಾ ಪೆÇೀಲದಾಸ, ಗೌತಮ ನಾರಾಯಣ,ವಿಠಲ ಪಟ್ಟಣಕರ್, ಲಕ್ಷ್ಮೀಕಾಂತ ಹಿಂದೊಡ್ಡಿ, ಕೇಶಪ್ಪ ಬಿರಾದಾರ್, ಸಂತೋಷ ಹಳ್ಳಿಖೇಡ್, ಉಮೇಶ ಜಮಗಿ, ಅಶೋಕ ಕಾಗೆ, ನರಸಪ್ಪ Áತ್ಮಾಪುರ, ಅಶೋಕ ಹಣಕುಣಿ, ಅರುಣ ಬಾವಗಿ, ದಯಾನಂದ ಮೇತ್ರೆ, ಮನೋಜ ಸೀತಾಳೆ ಇತರರಿದ್ದರು.