ಕಿಡಿಗೇಡಿಗಳಿಂದ ನರೇಗಾ ಕೂಲಿ ಕಾರ್ಮಿಕರ ಮೇಲೆ ಹಲ್ಲೆ

15kkr1(7-25 - narega protection pc.docx
Published on

ಕಿಕ್ಕೇರಿ: ಸಮೀಪದ ಮಂದಗೆರೆ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಕೂಲಿ ಕಾರ್ಮಿಕರು ಕೆಲಸ ಮಾಡುವಾಗ ಕೆಲವು ಕಿಡಿಗೇಡಿಗಳು ಹಿಂಸೆ ನೀಡುತ್ತಿದ್ದಾರೆ ಎಂದು ಕೂಲಿ ಕಾರ್ಮಿಕರು ಆರೋಪಿಸಿ ಮಂಗಳವಾರ ಕಿಕ್ಕೇರಿ ಪೊಲೀಸ್ ಠಾಣೆಗೆ ಆಗಮಿಸಿ ತಮ್ಮ ರಕ್ಷಣೆಗಾಗಿ ಮನವಿ ಸಲ್ಲಿಸಿದರು.

ನರೇಗಾ ಕೂಲಿ ಕಾರ್ಮಿಕರ ಮೇಟಿ(ಮುಖ್ಯಸ್ಥ) ಗೋಪಾಲ್ ಮಾತನಾಡುತ್ತ, ಬೇವಿನಹಳ್ಳಿ, ಶ್ರವಣನಹಳ್ಳಿ, ಚಿಕ್ಕಮಂದಗೆರೆ, ಗ್ರಾಮದ 150 ನರೇಗಾ ಕೂಲಿಕಾರ್ಮಿಕರು ಕೆಲಸದ ಮೇಟಿಯಾಗಿರುವ ಪವಿತ್ರಾ, ಸುರೇಶ್ ಹಾಗೂ ತಮ್ಮ ಉಸ್ತುವಾರಿಯಲ್ಲಿ ಬೇವಿನಹಳ್ಳಿ ಅಮಾನಿಕೆರೆಯ ಹೂಳು ಎತ್ತುವ ಕೆಲಸ ಮಾಡುತ್ತಿದ್ದರು. ಕೆಲವು ಕಿಡಿಗೇಡಿಗಳು ಸ್ಥಳಕ್ಕೆ ಆಗಮಿಸಿ ಕೂಲಿಕಾರ್ಮಿಕರ ಮೇಲೆ ಹಲ್ಲೆ ನಡೆಸಿ ಕೆಲಸ ಮಾಡದಂತೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು.

ಮೇಟಿ ಪವಿತ್ರಾ ಮಾತನಾಡಿ, ಆಗಿಂದಾಗ್ಗೆ ಕಿಡಿಗೇಡಿಗಳು ಕೆಲಸ ಮಾಡುವ ಸ್ಥಳಕ್ಕೆ ಆಗಮಿಸಿ ಮಹಿಳೆಯರ ಮೇಲೆ ಅವಾಚ್ಯ ಶಬ್ದಗಳಿಂದ ಮೂದಲಿಸುವುದು, ಬೆದರಿಕೆ ಹಾಕುವುದರಿಂದ ಕೆಲಸ ಮಾಡಲು ಭಯವಾಗಿದೆ. ಮಹಿಳೆಯರು ಬಹಿರ್ದೆಸೆಗೆ ಹೋಗುವಾಗ ಡ್ರೋನ್ ಮೂಲಕ ವಿಡಿಯೋ ಮಾಡುವುದು ಮತ್ತಿತರ ರೀತಿ ತೊಂದರೆ ನೀಡುತ್ತಿದ್ದಾರೆ. ಈ ಬಗ್ಗೆ ಮೇಲಾಧಿಕಾರಿಗಳಿಗೆ ದೂರು ನೀಡಿದಾಗ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಮಂದಗೆರೆ ಗ್ರಾಪಂ ಪಿಡಿಒ ಹಾಗೂ ತಾ.ಪಂ. ಇಒ ಭರವಸೆ ನೀಡಿದ್ದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಲವತ್ತುಕೊಂಡರು.

ಯಂತ್ರೋಪಕರಣಗಳಲ್ಲಿ ಕೆಲಸ ಮಾಡುವ ಹಲವು ಬಲಾಢ್ಯರ ಕುಮ್ಮಕ್ಕಿನಿಂದ ಇಂತಹ ಬೆದರಿಕೆ ಹಲ್ಲೆ ನಡೆಯುತ್ತಿದ್ದು, ಕಿಡಿಗೇಡಿಗಳ ಮೇಲೆ ಕಾನೂನು ಕ್ರಮ ಜರುಗಿಸಿ ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು. ನಟರಾಜು, ಕಾಂತಾಮಣಿ, ಕಾವ್ಯಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net