ಕಿಡಿಗೇಡಿಗಳಿಂದ ತೋಟದ ಮನೆಗೆ ಬೆಂಕಿ

28rajesh4
Published on

ಚಾಮರಾಜನಗರ: ತಾಲೂಕಿನ ಹರದನಹಳ್ಳಿ ಹೋಬಳಿ ಬಂಡಿಗೆರೆ ಗ್ರಾಮದ ನಿವಾಸಿ ಬಂಗಾರಶೆಟ್ಟಿ ಅವರ ತೋಟದ ಮನೆಗೆ ಶುಕ್ರವಾರ ರಾತ್ರಿ ಕಿಡಿಗೀಡಿಗಳು ಬೆಂಕಿ ಹಾಕಿದ್ದಾರೆ.

ಗ್ರಾಮದ ಮರಗದ ಕೆರೆ ಏರಿ ಪಕ್ಕದಲ್ಲಿರುವ ಜಮೀನಿನಲ್ಲಿದ್ದ ತೋಟದ ಮನೆಗೆ ಬಂಗಾರಶೆಟ್ಟಿ ಅವರು ಶನಿವಾರ ಬೆಳಗ್ಗೆ ಭೇಟಿ ನೀಡಿದಾಗ ತೋಟದ ಮನೆಗೆ ಬೆಂಕಿ ಹಾಕಿರುವುದು ತಿಳಿದುಬಂದಿದೆ. ರಾತ್ರಿಯಲ್ಲಾ ಬೆಂಕಿ ಉರಿದ ಪರಿಣಾಮವಾಗಿ, ತೋಟದ ಮನೆಯಲ್ಲಿದ್ದ ಮೋಟರ್, ಡ್ರಿಪ್‌ಪೈಪ್, ಕೇಬಲ್, ಸರಗೊಬ್ಬರ, ಸರ್ವೀಸ್ ವೈರ್‌ಗಳು ಹಾಗೂ ಇನ್ನಿತರೆ ಕೃಷಿ ಸಂಬಂಧಿತ ಉಪಕರಣಗಳು ಸುಟ್ಟುಹೋಗಿದೆ. ಇದರಿಂದ ರೈತ ಬಂಗಾರಶೆಟ್ಟಿ ಅವರಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net