ಕಿಡಿಗೇಡಿಗಳಿಂದ ಜಕಣಾಚಾರಿ ಹೆಸರಿನ ಫಲಕಕ್ಕೆ ಹಾನಿ

jakana
Published on

ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
ಪಟ್ಟಣದ ಕೋಟೆ ಸಮೀಪದ ಬೈಪಾಸ್ ವೃತ್ತದಲ್ಲಿದ್ದ ಜಕಣಾಚಾರಿ ಹೆಸರಿನ ನಾಮಫಲಕವನ್ನು ಕಿಡಿಗೇಡಿಗಳು ಸೋಮವಾರ ರಾತ್ರಿ ಹಾಳುಗೆಡವಿದ್ದಾರೆ.
ದುಷ್ಕರ್ಮಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಸುವರ್ಣ ಕರ್ನಾಟಕ ವಿಶ್ವಕರ್ಮ ರಕ್ಷಣಾ ವೇದಿಕೆ ಹಾಗೂ ವಿಶ್ವಕರ್ಮ ಸಮಾಜದಿಂದ ದೇವನಹಳ್ಳಿ ಪೋಲಿಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಸಿಸಿ ಕ್ಯಾಮರಾ ಪರಿಶೀಲಿಸಿ, ಕಿಡಿಗೇಡಿಗಳ ಪತ್ತೆಗೆ ಮುಂದಾಗಿದ್ದಾರೆ.
ವೇದಿಕೆಯ ಮಹಿಳಾ ಪ್ರಧಾನ ಕಾರ್ಯದರ್ಶಿ ಎನ್.ಇ.ಗೀತಾಂಜಲಿ ರಾಮಕೃಷ್ಣಾಚಾರಿ ಮಾತನಾಡಿ, 5 ವರ್ಷಗಳ ಹಿಂದೆ ನಮ್ಮ ಸಂಘಟನೆಯ ಹೊರಾಟದ ಫಲವಾಗಿ ಕೋಟೆ ಹಕ್ಕುಪೇಟೆ ಸಂಪರ್ಕಿಸಿರುವ ವೃತ್ತಕ್ಕೆ ಅಮರಶಿಲ್ಪಿ ಜಕಣಾಚಾರಿ ವೃತ್ತ ಎಂದು ನಾಮಕರಣ ಮಾಡಿ ಗ್ರಾೃನೈಟ್ ಫಲಕ ಅಳವಡಿಸಲಾಗಿತ್ತು. ವಿಶ್ವಕರ್ಮ ಜಯಂತಿ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಅಲ್ಲಿ ಸ್ವಚ್ಛಗೊಳಿಸಲು ಹೋದಾಗ ನಾಮಫಲಕ ಹಾಳುಗೆಡವಿರುವುದು ಗಮನಕ್ಕೆ ಬಂದಿತು ಎಂದ ಅವರು, ಇಲ್ಲಿ ಮೊದಲಿದ್ದಂತೆ ನಾಮಫಲಕವನ್ನು ಸರ್ಕಾರ ಮರು ಸ್ಥಾಪಿಸಬೇಕು ಎಂದರು.
ವೇದಿಕೆ ತಾಲೂಕು ಅಧ್ಯಕ್ಷ ನಂಜುಂಡೇಶ್ವರಮೂರ್ತಿ, ಪ್ರಧಾನ ಕಾರ್ಯದರ್ಶಿ ಎನ್.ಎಸ್.ಗಂಗಾಧರಾಚಾರಿ, ಉಪಾಧ್ಯಕ್ಷ ಸುಬ್ಬಾಚಾರಿ, ಸಲಹಾ ಸಮಿತಿ ಅಧ್ಯಕ್ಷ ಶ್ರೀನಿವಾಸಾಚಾರಿ, ಗೌರವಾಧ್ಯಕ್ಷ ಗಂಗಾಧರಾಚಾರಿ, ಸಹಕಾರ್ಯದರ್ಶಿ ಎನ್.ಮಂಜುನಾಥಾಚಾರಿ, ಪದಾಧಿಕಾರಿಗಳಾದ ಎ.ವಾಸುದೇವಾಚಾರಿ, ಮಂಜುನಾಥಾಚಾರ್, ನಾಗರಾಜಾಚಾರಿ, ಸುಧಾಕರಾಚಾರಿ, ಕವಿತಾ ಗೋಪಾಲಾಚಾರಿ, ಗೊವಿಂದಾಚಾರಿ, ಜಯಲಕ್ಷ್ಮಮ್ಮ, ಶೋಭಾ, ನಾಗರತ್ನಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net