

ಔರಾದ್: ಬಸವಣ್ಣನವರ ಪುತ್ಥಳಿ, ಪ್ರತಿಮೆ, ಭಾವಚಿತ್ರಗಳನ್ನು ಗುರಿಯಾಗಿಸಿಕೊಂಡು ಅಪಮಾನ ಮಾಡುವ ಘಟನೆಗಳು ಹೆಚ್ಚುತ್ತಿದ್ದು, ಅವುಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಅನೀಲ ಜಿರೋಬೆ ಒತ್ತಾಯಿಸಿದ್ದಾರೆ. ಹಲಕರ್ಟಿಯಲ್ಲಿ ಬಸವೇಶ್ವರರ ಭಾವಚಿತ್ರ ವಿರೂಪಗೊಳಿಸಿರುವುದು ಖಂಡನೀಯ.
ಜಗತ್ತಿಗೆ ಶಾಂತಿ, ಸೌಹಾರ್ದ, ಜಾತ್ಯಾತೀತ, ಕಾಯಕ, ದಾಸೋಹದ ಮಹತ್ವ ಸಾರಿದ ಬಸವಣ್ಣನವರಿಗೆ ಅವಮಾನ ಸಹಿಸಲ್ಲ. ದುಷ್ಕರ್ಮಿಗಳನ್ನು ಶೀಘ್ರ ಬಂಧಿಸಿ, ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದ್ದಾರೆ.