ಕಿಡಿಗೇಡಿಗಳನ್ನು ಗಡಿಪಾರು ಮಾಡಿ

24ydg03
Published on


ಯಾದಗಿರಿ: ಕಲಬುರಗಿ ನಗರದ ಜೇವಗರ್ಿ ರಸ್ತೆಯ ಕೊಟನೂರ ಮಠದ ಹತ್ತಿರದ ಸಂವಿಧಾನಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಮೂರ್ತಿಗೆ ಕಿಡಿಗೇಡಿಗಳು ಅಪಮಾನ ಮಾಡಿದ್ದನ್ನು ಖಂಡಿಸಿ ಬುಧವಾರ ನಗರದಲ್ಲಿ ದಲಿತಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.


ಇಲ್ಲಿನ ಸುಭಾಷ್ ವೃತ್ತದ ಬಳಿ ಮಾನವ ಸರಪಳಿ ನಿಮರ್ಿಸಿ ಧರಣಿ ನಡೆಸಿದ ಪ್ರತಿಭಟನಾಕಾರರು ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು. ದೇಶದಲ್ಲಿ ಇಂಥ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇಡೀ ಮಾನವ ಸಂಕಲು ತಲೆ ತಗ್ಗಿಸುವಂತಾಗಿದೆ. ಅಂಬೇಡ್ಕರ್ ಅವರು ಎಲ್ಲ ವರ್ಗಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸಿದ ಶ್ರೇಷ್ಠ ವ್ಯಕ್ತಿಯಾಗಿದ್ದಾರೆ. ಅಂಥ ಮಹಾತ್ಮನಿಗೆ ಅಪಮಾನ ಮಾಡುವ ಮೂಲಕ ಪೈಶಾಚಿಕ ಕೃತ್ಯವೆಸಗಿದ್ದಾರೆ ಎಂದು ಆರೋಪಿಸಿದರು.

ರಾಜ್ಯದಲ್ಲಿರುವ ಸಾಬಾ ಸಾಹೇಬರ ಪ್ರತಿ ಮೂರ್ತಿಗಳ ಹತ್ತಿರ ರಕ್ಷಣೆಗಾಗಿ ಪೊಲೀಸರ ನಿಯೋಜನೆ ಮಾಡಿ, ಸಿಸಿ ಟಿವಿ ಅಳವಡಿಸಬೇಕು. ಅಂಬೇಡ್ಕರ್ ಮೂತರ್ಿಗೆ ಅಪಮಾನಗೊಳಿಸಿದ ಕಿಡಿಗೇಡಿಗಳನ್ನು ದೇಶದ್ರೋಹಿ ಕಾಯ್ದೆಯಡಿ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net