ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ

16BK4
Published on

ಬಸವಕಲ್ಯಾಣ: ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದಲ್ಲಿ ಗುರು ಬಸವಣ್ಣನವರ ಭಾವಚಿತ್ರಕ್ಕೆ ಅವಮಾನ ಮಾಡಿದ್ದನ್ನು ಖಂಡಿಸಿ, ಕೃತ್ಯ ಎಸಗಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ, ವಿಶ್ವಸ್ಥ ಸಮಿತಿ ಹಾಗೂ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ, ಬಸವ ಪರ ಸಂಘಟನೆ ಆಶ್ರಯದಲ್ಲಿ ನಗರದ ಶ್ರೀ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಶಾಂತಗೌಡ ಬಿರಾದಾರಗೆ ಮನವಿ ಪತ್ರ ಸಲ್ಲಿಸಲಾಯಿತು.

ಹುಲಸೂರನ ಶ್ರೀ ಡಾ.ಶಿವಾನಂದ ಸ್ವಾಮೀಜಿ ಮಾತನಾಡಿ, ಗುರು ಬಸವಣ್ಣನವರ ಭಾವಚಿತ್ರಕ್ಕೆ ಕಿಡಿಗೇಡಿಗಳು ಅವಮಾನ ಮಾಡಿದ್ದು, ಹೇಯ ಕೃತ್ಯ. ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ತ್ರಿಪುರಾಂತನ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿ, ಮಾನವ ಕುಲಕ್ಕೆ ಅದ್ಭುತ ಸಂದೇಶ ನೀಡಿದ ಬಸವಣ್ಣನವರ ಭಾವಚಿತ್ರಕ್ಕೆ ಅವಮಾನ ಮಾಡಿರುವುದು ಖಂಡನೀಯ ಎಂದರು.

ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಅಧ್ಯಕ್ಷ ಲೋಕೇಶ ಜಮಖಂಡಿ, ನಗರ ಸಭೆ ಮಾಜಿ ಸದಸ್ಯ ರವೀಂದ್ರ ಕೊಳಕೂರ, ನಗರ ಸಭೆ ನಾಮ ನಿರ್ದೇಶಿತ ಸದಸ್ಯ ಸಿದ್ದು ಬಿರಾದಾರ, ಮುಖಂಡ ಶಿವಕುಮಾರ ಶೆಟಗಾರ, ಪ್ರಾಚಾರ್ಯ ಡಾ. ರುದ್ರಮಣಿ ಮಠಪತಿ ಮಾತನಾಡಿದರು.

ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೋರಕೆ, ಬಿಡಿವಿಸಿ ಅಧ್ಯಕ್ಷ ಶಶಿಕಾಂತ ದುರ್ಗೆ, ಪದಾಧಿಕಾರಿಗಳಾದ ಶ್ರೀಕಾಂತ ಬಡದಾಳೆ, ವಿವೇಕ ಹೊದಲೂರೆ, ರಾಜಕುಮಾರ ಹೊಳಕುಂದೆ, ಅಶೋಕ ನಾಗರಾಳೆ, ಸುಭಾಷ ಹೊಳಕುಂದೆ, ಕಾಶಪ್ಪ ಸಕ್ಕರಬಾವಿ, ಮಲ್ಲಯ್ಯ ಸ್ವಾಮಿ, ಭದ್ರಿನಾಥ ಪಾಟೀಲ್, ಜಗನ್ನಾಥ ಖೂಬಾ, ನಾಗಯ್ಯ ಸ್ವಾಮಿ, ಗದಗೆಪ್ಪ ಹಲಶೆಟ್ಟೆ, ಸೊಮಶೇಖರ ವಸ್ತçದ, ಪ್ರಮುಖರಾದ ಶಿವಕುಮಾರ ಬಿರಾದಾರ, ಜಗನ್ನಾಥ ಪಾಟೀಲ್, ಸಂಗಮೇಶ ಅವಸೆ, ಅಮರ ಬಡದಾಳೆ, ಸಂಗಮೆಶ ಸಜ್ಜನಶೆಟ್ಟಿ ಇತರರಿದ್ದರು.

ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಮತ್ತು ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ, ವಿಶ್ವಸ್ಥ ಸಮಿತಿಯಿಂದ ಪ್ರತ್ಯೇಕ ಮನವಿ ಪತ್ರ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net