

ಗುಂಡ್ಲುಪೇಟೆ: ತಾಲೂಕಿನ ಕಲೀಗೌಡನಹಳ್ಳಿ ಗ್ರಾಮದಲ್ಲಿ ಫ್ಲೆಕ್ಸ್ ಹರಿದುಹಾಕಿದ್ದ ಮೂವರು ಕಿಡಿಗೇಡಿಗಳ ವಿರುದ್ಧ ಪಟ್ಟಣದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗ್ರಾಮದ ಕನಕ ಸಮುದಾಯ ಭವನದ ಮುಂದೆ ಅಳವಡಿಸಿದ್ದ ಕನಕದಾಸ ಮತ್ತು ಸಂಗೊಳ್ಳಿ ರಾಯಣ್ಣ ಅವರ ಫ್ಲೆಕ್ಸ್ ಹರಿದ ಘಟನೆ ಬಗ್ಗೆ ಗ್ರಾಮದ ಸುರೇಶ್ ಎಂಬುವರು ದೂರು ನೀಡಿದ್ದ ಹಿನ್ನೆಲೆಯಲ್ಲಿ ಅದೇ ಗ್ರಾಮದ ವಿಷ್ಣು, ಶಿವಪ್ಪ, ಮಣಿ ಎಂಬ ಮೂವರ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.