ಕಿಡಿಗೇಡಿ ಹಚ್ಚಿದ ಬೆಂಕಿಗೆ ತೆಂಗು ನಾಶ

22,,kkr,2
Published on

ಕಿಕ್ಕೇರಿ: ಹೋಬಳಿಯ ಕಳ್ಳನಕೆರೆ ಗ್ರಾಮದಲ್ಲಿ ಶುಕ್ರವಾರ ರೈತರ ಜಮೀನಿಗೆ ಬೆಂಕಿ ಬಿದ್ದು ಅಪಾರ ಪ್ರಮಾಣದಲ್ಲಿ ತೆಂಗಿನ ಗಿಡ ನಾಶವಾಗಿದೆ. ಅವಘಡಕ್ಕೆ ದಾರಿಹೋಕರು ಹಚ್ಚಿರುವ ಬೆಂಕಿಯ ಕಿಡಿ ಕಾರಣ ಎನ್ನಲಾಗಿದೆ. ಬೇಸಿಗೆಯ ಬಿಸಿಲಿನ ತಾಪಕ್ಕೆ ಆಸುಪಾಸಿನ ಐದಾರು ಜಮೀನಿನಲ್ಲಿದ್ದ ತೆಂಗು, ಅಡಕೆ ಸುಟ್ಟು ಭಸ್ಮವಾಗಿದೆ.


ಪುಟ್ಟೇಗೌಡರ 22 ಗುಂಟೆ ಜಮೀನಿನಲ್ಲಿದ್ದ 40 ತೆಂಗಿನ ಸಸಿ, 20 ಅಡಕೆ ಮರಕ್ಕೆ ಹಾನಿಯಾಗಿದೆ. ಕೆ.ಬಿ.ನಿಂಗರಾಜು ಅವರ ಜಮೀನಿನ 40 ತೆಂಗಿನ ಮರ, ಸುಶೀಲಮ್ಮ ಅವರ ಜಮೀನಿನ 20 ತೆಂಗು, ಕೆ.ಆರ್.ಲೋಹಿತ್ ಜಮೀನಿನಲ್ಲಿದ್ದ 3 ತೆಂಗಿನ ಮರ, 10 ತೆಂಗಿನ ಸಸಿ ಸಂಪೂರ್ಣ ನಾಶವಾಗಿದೆ. ವಿಷಯ ತಿಳಿದು ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಯಶಸ್ವಿಯಾದರು.


ಕಾರ್ಯಾಚರಣೆಯಲ್ಲಿ ಅಗ್ನಿಶಾಮಕದಳ ಠಾಣಾಧಿಕಾರಿ ಶಿವಣ್ಣ, ಸಹಾಯಕ ಠಾಣಾಧಿಕಾರಿ ಚಂದ್ರಶೇಖರ್, ಸಿಬ್ಬಂದಿ ಶ್ರೀಕಾಂತ್, ಓಂಕಾರ್ ಪಾಟೀಲ್, ಶ್ರೀಶೈಲ ಕುದರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net