ಕಿಟ್ ವಿತರಣೆಯಲ್ಲಿ ಗೊಂದಲ

31KWR5
Published on

ಕಾರವಾರ: ಅಸಂಘಟಿತ ಕಾರ್ವಿುಕರಿಗೆ ಕಾರ್ವಿುಕ ಕಲ್ಯಾಣ ಇಲಾಖೆಯಿಂದ ಬಂದ ಕಿಟ್ ವಿತರಣೆ ವೇಳೆ ಸಾಕಷ್ಟು ಜನ ಸೇರಿದ್ದರಿಂದ ಗೊಂದಲ ಉಂಟಾದ ಘಟನೆ ನಗರದಲ್ಲಿ ಭಾನುವಾರ ನಡೆದಿದೆ.

ಇಲಾಖೆಯಿಂದ ಕಾರವಾರ- ಅಂಕೋಲಾ ಕ್ಷೇತ್ರಕ್ಕೆ 3 ಸಾವಿರ ಕಿಟ್ ಪೂರೈಕೆಯಾಗಿತ್ತು. ಫೋಟೋಗ್ರಾಫರ್​ಗಳು, ಟೇಲರ್, ಗ್ಯಾರೇಜ್ ಕಾರ್ವಿುಕರು ಸೇರಿ ವಿವಿಧ ಅಸಂಘಟಿತ ಕಾರ್ವಿುಕರನ್ನು ಕಿಟ್ ವಿತರಣೆಗಾಗಿ ಮಾರುತಿ ಮಂದಿರದ ಸಮೀಪದ ಹಾಲ್​ಗೆ ಆಹ್ವಾನಿಸಲಾಗಿತ್ತು. ಬಿಜೆಪಿ ಕಾರ್ಯಕರ್ತರು ವಿತರಣೆ ಕಾರ್ಯದಲ್ಲಿ ತೊಡಗಿದ್ದರು. ಆದರೆ, ಇನ್ನೂ ಹಲವರು ಬಂದು ಸೇರಿದ್ದರಿಂದ ಪರಸ್ಪರ ಅಂತರ ಕಾಪಾಡಲಾಗದೇ ಗೊಂದಲ ಉಂಟಾಗಿದೆ. ಭಾನುವಾರ ಮಧ್ಯಾಹ್ನ ಅರ್ಧಕ್ಕೇ ಕಿಟ್ ವಿತರಣೆ ಸ್ಥಗಿತಗೊಳಿಸಲಾಯಿತು. ಮಧ್ಯಾಹ್ನ ಮತ್ತೆ ಜನ ಸೇರಿ ಕಿಟ್ ನೀಡುವಂತೆ ಒತ್ತಾಯಿಸಿದರು. ಅಸಂಘಟಿತ ಕಾರ್ವಿುಕರಿಗೆ ಬಂದ ಕಿಟ್​ಗಳನ್ನು ನಮ್ಮ ಮೇಲಧಿಕಾರಿಗಳ ಸೂಚನೆಯಂತೆ ಸಂಬಂಧಪಟ್ಟ ಶಾಸಕರಿಗೆ ಹಸ್ತಾಂತರಿಸಲಾಗಿದೆ. ವಿತರಣೆಯ ಜವಾಬ್ದಾರಿ ಶಾಸಕರದ್ದಾಗಿದೆ ಎಂದು ಜಿಲ್ಲಾ ಕಾರ್ವಿುಕ ಕಲ್ಯಾಣ ಅಧಿಕಾರಿ ಕುಮಾರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net