ಕಿಟ್ ಗೊಂದಲ; ಕಾರ್ಮಿಕರ ದಿಢೀರ್ ಪ್ರತಿಭಟನೆ

Published on

ಹಾವೇರಿ: ಕಾರ್ಮಿಕ ಇಲಾಖೆ ವಿದ್ಯಾರ್ಥಿ ಕಿಟ್ ವಿತರಣೆಯಲ್ಲಿ ಗೊಂದಲದಿಂದಾಗಿ ನಗರದ ಗುತ್ತಲ ರಸ್ತೆಯ ಎಪಿಎಂಸಿಯಲ್ಲಿ ಸಾವಿರಾರು ಕಾರ್ಮಿಕರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ಕಿಟ್ ವಿತರಿಸುವುದಾಗಿ ಕಾರ್ಮಿ ಇಲಾಖೆ ಅಧಿಕಾರಿಗಳು ಸಂದೇಶದ ಮೂಲಕ ತಿಳಿಸಿದ್ದರು. ಹಾಗಾಗಿ, ಜಿಲ್ಲೆಯ ಸಾವಿರಾರು ಕಾರ್ಮಿಕರು ಹಾಗೂ ಅವರ ಮಕ್ಕಳು ನಿನ್ನೆಯಿಂದಲೇ ಎಪಿಎಂಸಿಗೆ ಜಮಾಯಿಸಿದ್ದರು. ಬೆಳಗ್ಗೆ ಕೊಡುವುದಾಗಿ ಹೇಳಿದ್ದ ಅಧಿಕಾರಿಗಳು ಇದೀಗ ಕಿಟ್ ಖಾಲಿಯಾಗಿವೆ ಎನ್ನುತ್ತಿದ್ದಾರೆ. ನಸುಕಿನ ಜಾವ ಲಾರಿಯಲ್ಲಿ ಕಿಟ್ ಗಳನ್ನು ಕಳ್ಳಸಾಗಣೆ‌ ಮಾಡಿದ್ದಾರೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ.

ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು, ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net