ಕಿಚ್ಚ ಸುದೀಪ್‌ರಿಂದ ಮದಕರಿ ನಾಯಕರ ಭಾವಚಿತ್ರ ಅನಾವರಣ

CTD 8 MADAKARI NAYAKRU-SUDIP -02
Published on


ಚಿತ್ರದುರ್ಗ: ದುರ್ಗದ ದೊರೆ ರಾಜವೀರ ಮದಕರಿನಾಯಕನ ನೂತನ ಭಾವಚಿತ್ರವನ್ನು ಅನಾವರಣಗೊಳಿಸುವುದು ನನ್ನಲ್ಲಿ ಹೆಚ್ಚು ಸಂತಸ ತಂದಿದೆ ಎಂದು ಚಿತ್ರನಟ ಕಿಚ್ಚ ಸುದೀಪ್ ಹೇಳಿದರು.
ತಾರುಣ್ಯದಲ್ಲಿ ಮದಕರಿ ನಾಯಕನ ಭಾವಚಿತ್ರವನ್ನು ಬೆಂಗಳೂರಿನ ತಮ್ಮ ನಿವಾಸದಲ್ಲಿ ಭಾನುವಾರ ಬಿಡುಗಡೆಗೊಳಿಸಿ ಮಾತನಾಡಿ, ಈ ಚಿತ್ರ ಅದ್ಭುತವಾಗಿದೆ ಎಂದು ಹರ್ಷಿಸಿದರು.
ಅ.13ರಂದು ಚಿತ್ರದುರ್ಗದಲ್ಲಿ ಆಯೋಜಿಸಿರುವ ಮದಕರಿ ಜಯಂತಿ ಕಾರ‌್ಯಕ್ರಮ ಉತ್ತಮವಾಗಿ ನಡೆಯಲಿ ಎಂದು ಆಶಿಸಿದರು.
ನಾಯಕ ಸಂಘದ ಚಿತ್ರದುರ್ಗ ತಾಲೂಕು ಅಧ್ಯಕ್ಷ ಬಿ.ಕಾಂತರಾಜ್ ಮಾತನಾಡಿ, ನಮ್ಮ ಸಮಾಜದ ಸುದೀಪ್ ಮದಕರಿ ನಾಯಕನ ಭಾವಚಿತ್ರ ಬಿಡುಗಡೆಗೊಳಿಸಿರುವುದು ನಮ್ಮೆಲ್ಲರಲ್ಲೂ ಸಂತೋಷ ಉಂಟುಮಾಡಿದೆ ಎಂದರು.
ಮದಕರಿನಾಯಕ ಜಯಂತಿ ಅಂಗವಾಗಿ ಈ ಬಾರಿ ನೂತನ ಭಾವಚಿತ್ರ ಹೊರ ತರಬೇಕೆಂಬ ಉದ್ದೇಶದಿಂದ ಸಮಾಜದ ಅನೇಕ ಮುಖಂಡರು, ಇತಿಹಾಸಕಾರರು, ಸಾಹಿತಿಗಳು, ಕಲಾವಿದರು, ಕಾದಂಬರಿಕಾರ ಬಿ.ಎಲ್.ವೇಣು, ಸಂಶೋಧಕರಾದ ಲಕ್ಷ್ಮ ಣತೆಲಗಾವಿ, ಕಿರಣ್‌ಕುಮಾರ್ ಅವರೊಂದಿಗೆ ಚರ್ಚಿಸಿ, ಅವರ ಸಲಹೆಗಳೊಂದಿಗೆ ಮದಕರಿನಾಯಕ ಧರಿಸುತ್ತಿದ್ದ ಉಡುಪು, ಆಭರಣಗಳು ಮೊದಲಾದ ವಿವರಗಳನ್ನು ಪಡೆಯಲಾಯಿತು. ಬಳಿಕ ಚಿತ್ರದುರ್ಗದ ಪ್ರಸಿದ್ಧ ಕಲಾವಿದ ಕ್ರಿಯೇಟಿವ್ ವೀರೇಶ್ ಅವರು 20 ದಿನದೊಳಗೆ ಅದ್ಭುತವಾಗಿ ಚಿತ್ರಿಸಿದ್ದಾರೆ ಎಂದು ಹೇಳಿದರು.
ಜಿಲ್ಲಾಧ್ಯಕ್ಷ ಎಚ್.ಜೆ.ಕೃಷ್ಣಮೂರ್ತಿ, ನಗರಸಭೆ ಸದಸ್ಯ ದೀಪಕ್, ಅಹೋಬಲ ಟಿವಿಸ್ ಮಾಲೀಕ ಅರುಣ್‌ಕುಮಾರ್, ಮುಖಂಡರಾದ ಅಂಜಿನಪ್ಪ, ಲಿಂಗವ್ವನಾಗ್ತಿಹಳ್ಳಿ ತಿಪ್ಪೇಸ್ವಾಮಿ, ಗೋಪಾಲಸ್ವಾಮಿ ನಾಯಕ್, ತಿಪ್ಪೇಸ್ವಾಮಿ, ದರ್ಶನ್ ಇಂಗಳದಾಳ್, ರವಿಕುಮಾರ್, ಬ್ಯಾಂಕ್ ಕಿರಣ್‌ಕುಮಾರ್, ಗಿರೀಶ್, ಗುರುನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net