

ಕಿಕ್ಕೇರಿ: ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಸಮಿತಿ ನೂತನ ಅಧ್ಯಕ್ಷರಾಗಿ ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಶುಕ್ರವಾರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೋಡಿಮಾರನಹಳ್ಳಿ ದೇವರಾಜು ನೇತೃತ್ವದಲ್ಲಿ ಕಾರ್ಯಕರ್ತರು ಹಾಗೂ ಮುಖಂಡರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಿಸಿದರು.
ಕಾಂಗ್ರೆಸ್ ಪಕ್ಷದ ಗಟ್ಟಿತನಕ್ಕೆ ಮತ್ತಷ್ಟು ಬಲ ಬರಲು ಕರ್ನಾಟಕದ ಹಿರಿಯ ಮುತ್ಸದ್ದಿ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆ ಹೊಸ ಭಾಷ್ಯ ಬರೆಯಲಿದೆ. ಕಾರ್ಯಕರ್ತರು ಹಾಗೂ ಯುವ ಮುಖಂಡರಲ್ಲಿ ಹೊಸ ಉತ್ಸಾಹದ ಶಕೆ ಆರಂಭವಾಗಲಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ತಿಳಿಸಿದರು.
ತಾಪಂ ಮಾಜಿ ಸದಸ್ಯ ಗೋವಿಂದನಹಳ್ಳಿ ಶಾಮಣ್ಣ, ಜಿಲ್ಲಾ ಕಾಂಗ್ರೆಸ್ ವಕ್ತಾರ ಮಾದಾಪುರ ರಾಮಕೃಷ್ಣೇಗೌಡ, ಕೆ.ಆರ್.ಪೇಟೆ ಪುರಸಭಾ ಸದಸ್ಯ ಪ್ರೇಮಕುಮಾರ್, ಮುಖಂಡರಾದ ಸಾಸಲು ಈರಪ್ಪ, ಲಕ್ಷ್ಮೀಪುರ ಚಂದ್ರು, ರಘು, ಕೆ.ವೈ.ಹರೀಶ್, ತಾರಾನಾಥ್, ಗುಂಡ, ದೇವರಾಜು, ದಯಾನಂದ್, ಜಯರಾಂ, ಆನೆಗೊಳ ಮಂಜುನಾಥ್, ಕೆಂಪೇಗೌಡ, ಪುಟ್ಟೇಗೌಡ, ರಮೇಶ್, ಜಾಣೇಗೌಡ ಮತ್ತಿತರರಿದ್ದರು.