ಕಿಕ್ಕೇರಿ ಪಟ್ಟಣದಲ್ಲಿ ಪೊಲೀಸರಿಂದ ಪಥಸಂಚಲನ

21-kkr2
ಕಿಕ್ಕೇರಿಯಲ್ಲಿ ಚುನಾವಣೆ ಶಾಂತಿಯುತವಾಗಿ ನಡೆಯಲು ಪೊಲೀಸ್ ಇಲಾಖೆ, ಅರೆಸೇನೆ ತುಕಡಿಯಿಂದ ಪಥ ಸಂಚಲನ ನಡೆಸಲಾಯಿತು. ಇನ್‌ಸ್ಪೆಕ್ಟರ್ ಸುನೀಲ್‌ಕುಮಾರ್, ಸಿಬ್ಬಂದಿ ಇದ್ದರು.
Published on

ಕಿಕ್ಕೇರಿ: ಶಾಂತಿಯುತವಾಗಿ ವಿಧಾನಸಭಾ ಚುನಾವಣೆ ನಡೆಯಲು ಪೊಲೀಸರು ಪಟ್ಟಣದಲ್ಲಿ ಶುಕ್ರವಾರ ಜಾಥಾ ನಡೆಸಿದರು.

ಪಟ್ಟಣದ ಪ್ರಮುಖ ರಸ್ತೆಗಳಾದ ಅಂಗಡಿಬೀದಿ, ಕೋಟೆ ಆಂಜನೇಯ, ಗಣೇಶ ಬೀದಿ, ಬ್ರಹ್ಮೇಶ್ವರ ದೇಗುಲ ಬೀದಿ, ಹೊಸಬೀದಿಯಲ್ಲಿ ಪಥಸಂಚಲನ ನಡೆಸಿದರು.

ಇನ್‌ಸ್ಪೆಕ್ಟರ್ ಸುನೀಲ್‌ಕುಮಾರ್ ಮಾತನಾಡಿ, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮತದಾರನೇ ಸಾರ್ವಭೌಮ. ಕಿಕ್ಕೇರಿ ಹೋಬಳಿಯ ಸರಹದ್ದಿನಲ್ಲಿ ಲಕ್ಷ್ಮೀಪುರ, ಮಾದಾಪುರ, ದಬ್ಬೇಘಟ್ಟ, ಐಕನಹಳ್ಳಿ, ಚೌಡೇನಹಳ್ಳಿ, ಮಾಕವಳ್ಳಿ, ಆನೆಗೊಳ ಸೇರಿದಂತೆ ಮಂದಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿವೆ. ನಿರ್ಭಿತಿಯಿಂದ ಮತದಾರ ಮತ ಚಲಾಯಿಸಬೇಕು. ಯಾವುದೇ ಆಮಿಷಗಳಿಗೆ ಒಳಗಾಗದಿರಿ. ಹಣ, ಮದ್ಯ, ಬಾಡೂಟದಂತಹ ಯಾವುದೇ ಚಟುವಟಿಕೆಗಳು ನಡೆದಲ್ಲಿ ಮಾಹಿತಿ ನೀಡಬೇಕು. ತಮಗೆ ಮತ ಹಾಕಬೇಕು ಎಂದು ಬೆದರಿಸುವ ಸಂಗತಿಗಳಿದ್ದಲ್ಲಿ ಹೇಳಿ ಸಂಬಂಧಪಟ್ಟ ಅಧಿಕಾರಿಗಳು ದೂರು ನೀಡಬಹುದು. ಮುಕ್ತ, ಪಾರದರ್ಶಕತೆಯ ಮತದಾನಕ್ಕೆ ಸಹಕರಿಸಿ. ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಅನೀವಾರ್ಯವಾಗಲಿದೆ. ಕಾನೂನು ಗೌರವಿಸುವ ಎಲ್ಲರನ್ನು ರಕ್ಷಿಸುವುದು ಇಲಾಖೆಯ ಧ್ಯೇಯವಾಗಿದೆ ಎಂದು ತಿಳಿ ಹೇಳಿದರು.

ಪೊಲೀಸ್ ಸಿಬ್ಬಂದಿ, ಅರೆಸೇನೆ ತುಕಡಿಯ ಸಿಬ್ಬಂದಿ ಪಥಸಂಚಲನ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net