ಕಿಕ್ಕೇರಮ್ಮನವರ ದಸರಾ ಮೆರವಣಿಗೆ ಸಂಭ್ರಮ

03-kkr-1(10-25 Kikkeramma dasara
Published on

ಕಿಕ್ಕೇರಿ: ಗ್ರಾಮದಲ್ಲಿ ವಿಜಯದಶಮಿ ಅಂಗವಾಗಿ ಗುರುವಾರ ಗ್ರಾಮ ದೇವತೆ ಕಿಕ್ಕೇರಮ್ಮನವರ ದಸರಾ ಮೆರವಣಿಗೆ ನಡೆಯಿತು.

ಪ್ರಮುಖ ಬೀದಿಗಳು, ಲಕ್ಷ್ಮೀಪುರ ಗ್ರಾಮದಲ್ಲಿ ದೇವಿ ಮೆರವಣಿಗೆ ಸಾಗಿತು. ಭಕ್ತರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ದೇವಿ ದರ್ಶನ ಪಡೆದು ಹಣ್ಣು ಕಾಯಿ ಅರ್ಪಿಸಿ ಕೃತಾರ್ಥರಾದರು. ಶರನ್ನವರಾತ್ರಿ ಅಂಗವಾಗಿ ಗ್ರಾಮದೇವತೆ ಕಿಕ್ಕೇರಮ್ಮನವರ ವಿಶೇಷ ಪೂಜೆ, 9ದಿನಗಳ ಅಡ್ಡಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ನಡೆದವು. ಬೆಳಗ್ಗೆ ದೇವಿಗೆ ವಿಶೇಷ ಪೂಜೆ, ಮೆರವಣಿಗೆಗೆ ಕಿಕ್ಕೇರಮ್ಮ ದೇವಿಯ ಒಕ್ಕಲಿನ ಲಕ್ಷ್ಮೀಪುರ ಗ್ರಾಮಸ್ಥರು ಉಪವಾಸವಿದ್ದು ಪೂಜೆ ಸಲ್ಲಿಸಿದರು.

ದೇವಿಯ ಮೆರವಣಿಗೆಯನ್ನು ಸುಬ್ಬರಾಯ ಛತ್ರದ ಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು. ದೇವಿಯ ಮೂಲಮೂರ್ತಿಗೆ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ಪುಷ್ಪಾರ್ಚನೆ, ಧೂಪ ದೀಪದಾರತಿ ಮಾಡಲಾಯಿತು. ಬೂನಾಸಿ, ಕೆಂಚಮ್ಮ, ಮಾರಮ್ಮ, ದೊಡ್ಡಹಟ್ಟಿ ವಠಾರದ ದೇವಿಯ ಆರಾಧಕರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net