ಕಾಸ್ಮೋಪಾಲಿಟನ್ ಕ್ಲಬ್‌ನಿಂದ ವಾಕಥಾನ್

47
Published on

ಮೈಸೂರು: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಗರದ ದಿ.ಕಾಸ್ಮೋಪಾಲಿಟನ್ ಕ್ಲಬ್ ವತಿಯಿಂದ ಮಂಗಳವಾರ ವಾಕಥಾನ್ ಆಯೋಜಿಸಲಾಗಿತ್ತು.


ಕ್ಲಬ್‌ನಿಂದ ಹೊರಟ ಕಾಲ್ನಡಿಗೆ ಜಾಥಾ ಕ್ರಾಫರ್ಡ್‌ಹಾಲ್ ವೃತ್ತ, ಮಹಾರಾಜ ಕಾಲೇಜು ಮೈದಾನದ ವೃತ್ತ, ಜಿಪಂ ಕಚೇರಿ, ಕೋರ್ಟ್, ಕೆ.ಜಿ.ಕೊಪ್ಪಲಿನ ರೈಲ್ವೆ ಬ್ರಿಡ್ಜ್ ಮೂಲಕ ಅಂದಾಜು 3 ಕಿ.ಮೀ. ಕ್ರಮಿಸಿ ಮರಳಿ ಕ್ಲಬ್‌ಗೆ ವಾಪಸ್ ಆಗಿ ಕೊನೆಗೊಂಡಿತು.


ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಮಾತನಾಡಿ, ದೇಶದ ಪ್ರತಿಯೊಬ್ಬರ ಆರೋಗ್ಯ ಚೆನ್ನಾಗಿದ್ದರೆ ದೇಶವೂ ಚೆನ್ನಾಗಿ, ಸುಭದ್ರವಾಗಿರುತ್ತದೆ ಎಂದರು.


ಇಂದಿನ ಕಲುಷಿತ ವಾತಾವರಣದಲ್ಲಿ ಮನುಷ್ಯ ಆರೋಗ್ಯವಾಗಿರಬೇಕಾದರೆ ನಿತ್ಯ 1 ಗಂಟೆಯಾದರೂ ನಡೆಯಬೇಕು. ಮಿತ ಆಹಾರ ಬಳಸಿದರೆ ದೇಹಕ್ಕೂ ಒಳ್ಳೆಯದು ದೇಶಕ್ಕೂ ಒಳ್ಳೆಯದು ಎಂದರು.


ದೇಶಕ್ಕೆ ಸ್ವಾತಂತ್ರ್ಯಬಂದು 77 ವರ್ಷವಾಗಿದೆ. ಬ್ರಿಟಿಷರ ಕಪಿಮುಷ್ಟಿಯಿಂದ ನಮ್ಮನ್ನು ಬಿಡುಗಡೆಗೊಳಿಸಲು ಹೋರಾಟ, ಬಲಿದಾನ, ತ್ಯಾಗ, ಸತ್ಯಾಗ್ರಹ, ಧರಣಿ ಮಾಡಿರುವ ಹಿರಿಯರನ್ನು ನಾವು ಸ್ಮರಿಸಬೇಕಾಗಿದೆ. ಸ್ವಾತಂತ್ರೃದ ನಂತರದಲ್ಲಿ ಹಸಿವು, ಬಡತನ, ನಿರುದ್ಯೋಗ, ಭ್ರಷ್ಟಾಚಾರವನ್ನು ತೊಲಗಿಸಲು ಸಂಕಲ್ಪ ಮಾಡಬೇಕಾಗಿದೆ. ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿ ಭಾರತವನ್ನು ಸ್ವಾವಲಂಬಿ ರಾಷ್ಟ್ರವನ್ನಾಗಿ ಮಾಡಬೇಕಾಗಿದೆ ಎಂದರು.


ಕ್ಲಬ್ ಅಧ್ಯಕ್ಷ ವಿ.ಗಿರೀಶ್‌ಗೌಡ, ಉಪಾಧ್ಯಕ್ಷ ಎಚ್.ಎನ್.ಜಯಪಾಲ್, ಕಾರ್ಯದರ್ಶಿ ವಿ.ಟಿ.ಶೆಟ್ಟಿ, ಖಜಾಂಚಿ ಜಿ.ಸಂಜಯ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net