

ಕಲಬುರಗಿ: ಡಾ.ಉಮೇಶ ಜಾಧವ ಗೆದ್ದು ಮೋದಿ ಪ್ರಧಾನಿ ಆಗದಿದ್ದರೆ ಹುಬ್ಬಳ್ಳಿಯ ನೇಹಾಗೆ ಆದ ಗತಿ, ಕಾಶ್ಮೀರ, ಕೇರಳ ಹಿಂದುಳಗ ಸ್ಥಿತಿ ಇದೀಗ ಬೆಂಗಳೂರು, ಹುಬ್ಬಳ್ಳಿಗೆ ಬಂದಿದೆ. ಹೀಗೆ ಮುಂದುವರಿದರೆ ಕಲಬುರಗಿಯ ನಮ್ಮ ಮನೆ ಬಾಗಿಲಿಗೆ ಬಂದರೂ ಅಚ್ಚರಿ ಇಲ್ಲ. ಮತ ಮಾರಿಕೊಂಡರೆ ನಮ್ಮನ್ನು ರಕ್ಷಣೆ ಮಾಡುವರ‍್ಯಾರು. ಅದಕ್ಕಾಗಿ ಎಚ್ಚರದಿಂದ ಮೋದಿಗೆ ಮತ ನೀಡಿ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದರು.
ಕಲಬುರಗಿ ಉತ್ತರ ಕ್ಷೇತ್ರದ ಶೆಟ್ಟಿ ಕಾಂಪ್ಲೆಕ್ಸ್ ಬಳಿ ಭಾನುವಾರ ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿ, ಐದು ಗ್ಯಾರಂಟಿ ಬೇಕೋ, ಮನೆ ಉಳಿಯಬೇಕೋ ಯೋಚಿಸಬೇಕು. ಹಿಂದುಗಳ ಇದ್ದಾಗ ಮಾತ್ರ ದೇಶದಲ್ಲಿ ಜಾತ್ಯಾತೀತತೆ, ಸಹಿಷ್ಣುತೆ ಇರುತ್ತದೆ. ಪಾಕಿಸ್ತಾನದಲ್ಲಿ ಹಿಂದು ಮಹಿಳೆಯರನ್ನು ಎಳೆದೊಯ್ತು ಮದುವೆ ಆಗುತ್ತಿದ್ದಾರೆ. ಅಂತ ಸ್ಥಿತಿ ನಮಗೆ ಬರುತ್ತದೆ ಎಂದು ಹೇಳಿದರು.
ಅಂಬೇಡ್ಕರ್ ಅವರು ಪಾಕಿಸ್ತಾನ ವಿಭಜನೆ ಒಡೆದರು. ಹಿಂದು ಸಮಾಜವನ್ನು ಒಡೆಯುವ ಪ್ರಯತ್ನ ಮಾಡಲಿಲ್ಲ. ಕಾಶ್ಮೀರದಲ್ಲಿ ಕಲ್ಲು ಹೊಡೆಯುತ್ತಿದ್ದರು. ಇದೀಗ ೩೭೦ ವಿಧಿ ತೆಗೆದುಹಾಕಿದ ನಂತರ ಎಲ್ಲವೂ ಶಾಂತಿಯುತವಾಗಿದೆ. ಕಲ್ಲು ಹೊಡೆಯುವುದು, ಪ್ರತಿಭಟನೆ ನಿಂತ್ತಿದೆ ಎಂದು ಹೇಳಿದರು. ಹುಬ್ಬಳ್ಳಿಯಲ್ಲಿ ಹತ್ಯೆಗೀಡಾದ ನೇಹಾ ಹಿರೇಮಠಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.