

ಚಾಮರಾಜನಗರ: ನಗರದ ರಂಗವಾಹಿನಿ ಸಂಸ್ಥೆ ವತಿಯಿಂದ ಕೊಡಮಾಡುವ 13ನೇ ವರ್ಷದ ಮುಳ್ಳೂರು ನಾಗರಾಜ ರಾಜ್ಯಮಟ್ಟದ ಕಾವ್ಯ ಪ್ರಶಸ್ತಿಗೆ ಕವನ ಸಂಕಲನ ಆಹ್ವಾನಿಸಲಾಗಿದೆ. ಪ್ರಶಸ್ತಿಯು 10,000 ರೂ. ನಗದು, ಪ್ರಶಸ್ತಿ ಫಲಕ ಒಳಗೊಂಡಿದೆ. ಸಂಕಲನ 2024ರಲ್ಲಿ ಪ್ರಕಟಗೊಂಡಿರಬೇಕು. ಏಪ್ರಿಲ್ ಮೊದಲ ವಾರ ಪ್ರಶಸ್ತಿ ಪ್ರದಾನ ಸಮಾರಂಭ ಮೈಸೂರಿನಲ್ಲಿ ನಡೆಯಲಿದೆ. ಆಸಕ್ತರು ತಮ್ಮ ಭಾವಚಿತ್ರ ಮತ್ತು ಕಿರು ಪರಿಚಯ ಸಹಿತ ಕವನ ಸಂಕಲನದ 4 ಪ್ರತಿಗಳನ್ನು ಸಿ.ಎಂ.ನರಸಿಂಹಮೂರ್ತಿ ಅಧ್ಯಕ್ಷರು, ರಂಗವಾಹಿನಿ, ಜಯದೇಗುಲ, 10ನೇ ಕ್ರಾಸ್, ನ್ಯಾಯಾಲಯದ ಎದುರು, ಚಾಮರಾಜನಗರ-571313 ಈ ವಿಳಾಸಕ್ಕೆ ಫೆ.26 ರೊಳಗೆ ಸಲ್ಲಿಸಬೇಕು. ವಿವರಗಳಿಗೆ 99161 15263 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.