ಕಾವೇರಿಗೆ ಶಾಸಕ ಎ.ಮಂಜು ಬಾಗಿನ

24ark4
Published on

ಅರಕಲಗೂಡು: ತಾಲೂಕಿನ ರಾಮನಾಥಪುರದ ಶ್ರೀ ರಾಮೇಶ್ವರ ದೇವಸ್ಥಾನ ಸನ್ನಿಧಿ ವಹ್ನಿ ಪುಷ್ಕರಣಿಯಲ್ಲಿ ತುಂಬಿ ಹರಿಯುತ್ತಿರುವ ಕಾವೇರಿಗೆ ಶಾಸಕ ಎ.ಮಂಜು ಸೋಮವಾರ ಬಾಗಿನ ಅರ್ಪಿಸಿದರು.


ಮಳೆಯಿಂದ ಹಾನಿಗೊಳಗಾದ ಜಮೀನು ಹಾಗೂ ಮನೆಗಳ ವರದಿಯನ್ನು ಕಂದಾಯ ಇಲಾಖೆ ನೌಕರರು ಸರ್ಕಾರಕ್ಕೆ ಸಲ್ಲಿಸಿ ಸಂತ್ರಸ್ತರಿಗೆ ಪರಿಹಾರ ದೊರಕಿಸಿಕೊಡಬೇಕು ಎಂದರು.


ತಹಸೀಲ್ದಾರ್ ಬಸವರಡ್ಡೆಪ್ಪ ರೋಣದ, ತಾಲೂಕು ಕಚೇರಿ ಶಿರಸ್ತೇದಾರ್ ಸಿ.ಸ್ವಾಮಿ, ಗ್ರಾಪಂ ಸದಸ್ಯರಾದ ಪುಷ್ಪ, ಸುನೀಲ್, ಮೋಹನ್, ಸಿದ್ದಯ್ಯ, ಉಪ ತಹಸೀಲ್ದಾರ್ ರವಿ, ರಾಜಸ್ವ ನಿರೀಕ್ಷಕ ಭಾಸ್ಕರ್, ಕೊಣನೂರು ರಾಜಸ್ವ ನಿರೀಕ್ಷಕ ಬಲರಾಮ್ ಹಾಗೂ ನಾಡ ಕಚೇರಿ ಸಿಬ್ಬಂದಿ ಇದ್ದರು.


ಮನೆ ಗೋಡೆ ಕುಸಿತ: ತಾಲೂಕಿನ ಎ.ಬಿ.ಎಂ.ಹಳ್ಳಿ ಗ್ರಾಮದಲ್ಲಿ ಸೋಮವಾರ ಸುರಿದ ಮಳೆಗೆ ಮುಬಿನಾ ಬಾನು ಅವರ ವಾಸದ ಮನೆಗೋಡೆ ಮತ್ತು ಛಾವಣಿ ಕುಸಿದಿದೆ. ನೇರಲಹಳ್ಳಿ ಗ್ರಾಮದಲ್ಲಿ ಮನೆಯೊಂದರ ಗೋಡೆ ಕುಸಿದಿದ್ದು, ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net