ಕಾವೇರಿ ಮಾತೆಗೆ ವಿಶೇಷ ಪೂಜೆ

IMG-20250711-WA0059
Published on

ಬೈಲುಕುಪ್ಪೆ: ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಕಾವೇರಿ ಬಿ.ಎಂ. ರಸ್ತೆ ಕಾವೇರಿ ನದಿ ಸಮೀಪ ಬಾರವಿ ಕಾವೇರಿ ಕನ್ನಡ ಸಂಘದ ವತಿಯಿಂದ ನಿರ್ಮಿಸಿರುವ ಕಾವೇರಿ ಮಾತೆಗೆ ಅಧ್ಯಕ್ಷ ರವೀಂದ್ರ ಪ್ರಸಾದ್ ಸಮ್ಮುಖದಲ್ಲಿ ಗುರು ಪೂರ್ಣಿಮೆ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಲಾಯಿತು.

ಅರ್ಚಕ ಪ್ರಸನ್ನಭಟ್ಟ ಅವರು ಕಾವೇರಿ ಪ್ರತಿಮೆಗೆ ಹಾಲು, ತುಪ್ಪ, ಅರಿಶಿಣ, ಕುಂಕುಮ ಹಾಗೂ ಎಳನೀರು ಅಭಿಷೇಕ ನೆರವೇರಿಸಿದರು.

ಕೊಪ್ಪ ಗ್ರಾಮದ ರಾಜು ಹಾಗೂ ಸುಜಾತಾ ಕುಟುಂಬಸ್ಥರು ಕಾವೇರಿ ಮಾತೆಗೆ ಹೊಸ ಸೀರೆ, ಕುಪ್ಪಸ, ಒಡವೆಗಳನ್ನು ಹಾಕಿ ವಿವಿಧ ಹೂಗಳಿಂದ ಅಲಂಕರಿಸಿ ಮಹಾಮಂಗಳಾರತಿ ನೆರವೇರಿಸಿದರು.

ಪೂಜೆ ಸೇವಾರ್ಥದಾರ ಮಹಾಲಿಂಗಸ್ವಾಮಿ, ಕಾವೇರಿ ನದಿಯ ಪಾವಿತ್ರೃ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ. ಪ್ರಕೃತಿಯನ್ನು ಆರಾಧಿಸುವುದರೊಂದಿಗೆ ಬೆಳೆಸಿ, ಉಳಿಸಿದಲ್ಲಿ ಮಾತ್ರ ಪರಿಸರದ ಸಮತೋಲನ ಕಾಪಾಡಲು ಸಾಧ್ಯ. ಈ ನಿಟ್ಟಿನಲ್ಲಿ ಜೀವನದಿ ಕಾವೇರಿ ಮತ್ತು ಪರಿಸರದ ಉಳಿವಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕಾಗಿದೆ ಎಂದರು.

ನಂತರ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಬಾರವಿ ಕಾವೇರಿ ಕನ್ನಡ ಸಂಘದ ಪ್ರಮುಖರಾದ ಬೇಬಿಂದ್ರ ಪ್ರಸಾದ್, ವಿಜಯೇಂದ್ರ ಪ್ರಸಾದ್, ರವೀಂದ್ರ ಪ್ರಸಾದ್, ಚಂದ್ರು, ಸೋಮಶೇಖರ್, ರುದ್ರೇಶ್, ಮಂಜು, ಗಿರೀಶ್, ಮಹಿಳೆಯರು ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net