

ಬೈಲಕುಪ್ಪೆ : ಪಿರಿಯಾಪಟ್ಟಣ ತಾಲೂಕಿನ ಕೊಪ್ಪ-ಬಿ.ಎಂ. ರಸ್ತೆ ಪಕ್ಕದಲ್ಲಿ ಕಾವೇರಿ ಕನ್ನಡ ಸಂಘದ ವತಿಯಿಂದ ನಿರ್ಮಿಸಲಾಗಿರುವ ಕಾವೇರಿ ಮಾತೆಗೆ 125ನೇ ಹುಣ್ಣಿಮೆ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಲಾಯಿತು.
ಸೇವಾರ್ಥದಾರರಾದ ಆವರ್ತಿ ಗ್ರಾಮದ ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಜಯಂತಿ ಸೋಮಶೇಖರ್ ಸಮ್ಮುಖದಲ್ಲಿ ಅರ್ಚಕ ಪ್ರಸನ್ನಭಟ್ ಅವರು ಕಾವೇರಿ ಮಾತೆಯ ಪ್ರತಿಮೆಯನ್ನು ಸ್ವಚ್ಛಗೊಳಿಸಿ, ವಿವಿಧ ಹೂಗಳಿಂದ ಸಿಂಗರಿಸಿ, ಹೋಮ ಹಮನ ನಡೆಸಿ ಮಹಾಮಂಗಳಾರತಿ ನೆರವೇರಿಸಿದರು. ಭಕ್ತರಿಗೆ ಪ್ರಸಾದ ನಿಯೋಗಿಸಿದರು
ಕಾವೇರಿ ಕನ್ನಡ ಸಂಘದ ಅಧ್ಯಕ್ಷ ಬೇಬಿಂದ್ರ ಪ್ರಸಾದ್, ಸದಸ್ಯರಾದ ರವೀಂದ್ರ ಪ್ರಸಾದ್, ವಿಜೇಂದ್ರಪ್ರಸಾದ್, ಭಕ್ತರಾದ ಸುನಂದಾ ಕೌಶಿಕ್, ಚಂದ್ರು, ಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯ ರಾಮಚಂದ್ರ, ಸೋಮಶೇಖರ್, ರುದ್ರೇಶ್, ಪುಟ್ಟರಾಜ್, ಚಂದ್ರು, ಮಹಿಳೆಯರು ಸೇರಿದಂತೆ ಇತರರು ಇದ್ದರು.