ಕಾವೇರಿ ನದಿಗೆ ಹಾರಿ ವ್ಯಾಪಾರಿ ಆತ್ಮಹತ್ಯೆ

sucide
Published on


ಮಂಡ್ಯ: ಕೆ.ಆರ್.ಸಾಗರ ಅಣೆಕಟ್ಟೆಯ ಬೃಂದಾವನದಲ್ಲಿನ ದೋಣಿ ವಿಹಾರ ಕೇಂದ್ರದ ಪಕ್ಕದಲ್ಲಿನ ಕಾವೇರಿ ನದಿಗೆ ಗುರುವಾರ ಸಂಜೆ ವ್ಯಾಪಾರಿಯೊಬ್ಬ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಮೈಸೂರು ಇಟ್ಟಿಗೂಡು ಬಡವಾಣೆ ನಿವಾಸಿ ವಿ.ಬಲರಾಮ್(58)ಆತ್ಮಹತ್ಯೆ ಮಾಡಿಕೊಂಡವರು. ವಿ.ಬಲರಾಮ್ ಮೈಸೂರು ಅಗ್ರಹಾರದಲ್ಲಿ ಅರಿಶಿಣ-ಕುಂಕುಮ ಅಂಗಡಿ ನಡೆಸುತ್ತಿದ್ದು, ಸಾಲಬಾಧೆಯ ಹಿನ್ನೆಲೆಯಲ್ಲಿ ಗುರುವಾರ ಮಧ್ಯಾಹ್ನ ಅಂಗಡಿಯಿಂದ ಮನೆಗೆ ಹೋಗದೆ ಕೆ.ಆರ್.ಸಾಗರಕ್ಕೆ ಬಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತನ ಸಹೋದರ ಕುಮಾರ್ ಕೆ.ಆರ್.ಸಾಗರ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಕೆಆರ್‌ಎಸ್ ಪೊಲೀಸರು, ಶವವನ್ನು ನದಿಯಿಂದ ಹೊರ ತೆಗೆದು ಶವ ಪರೀಕ್ಷೆಗೆ ಮೈಸೂರು ಕೆ.ಆರ್.ಆಸ್ಪತ್ರೆ ಶವಾಗಾರದಲ್ಲಿರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net