ಕಾವೇರಿ ನದಿಗೆ ಹಾರಿ ಆತ್ಮಹತ್ಯೆ

Published on

ಕೆ.ಆರ್.ಸಾಗರ: ಕೆ.ಆರ್.ಸಾಗರದ ಬೃಂದಾವನ ದೋಣಿ ವಿಹಾರ ಕೇಂದ್ರದ ಬಳಿ ಬುಧವಾರ ಕಾವೇರಿ ನದಿಗೆಹಾರಿ ಡಿ.ಪಿ. ಚೇತನಾ ಕುಮಾರಿ (40) ಎಂಬಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಂಜನಗೂಡು ಮೂಲದ ಈಕೆ ಮೈಸೂರು ನಿವಾಸಿಯಾಗಿದ್ದು, ಎರಡು ಪದವಿ ಪಡೆದಿದ್ದರೂ ನೌಕರಿ ಸಿಗದ ಕಾರಣ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಡೆತ್ ನೋಟ್ ಬರೆದಿಟ್ಟಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ. ಭದ್ರತಾ ಸಿಬ್ಬಂದಿ ಶವವನ್ನು ಹೊರತೆಗೆದಿದ್ದು, ಕೆ.ಆರ್.ಸಾಗರ ಠಾಣೆ ಪಿಎಸೈ ಬಸವರಾಜು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಮೃತರ ಸಹೋದರಿ ನೀಡಿದ ದೂರು ದಾಖಲಿಸಿ, ಮರಣೋತ್ತರ ಪರೀಕ್ಷೆಗೆ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಶವ ಸಾಗಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net