ಕಾವೇರಿ ತಂತ್ರಾಂಶದಿಂದ ನೋಂದಣಿ ಸುಲಭ

IMG-20230601-WA0178
Published on

ಚನ್ನರಾಯಪಟ್ಟಣ: ಕಾವೇರಿ 2.0 ಆನ್‌ಲೈನ್ ತಂತ್ರಾಂಶ ಅಳವಡಿಕೆಯಿಂದ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಜನದಟ್ಟಣೆ ಕಡಿಮೆಯಾಗಲಿದೆ ಎಂದು ತಹಸೀಲ್ದಾರ್ ಬಿ.ಎಂ.ಗೋವಿಂದರಾಜು ಅಭಿಪ್ರಾಯಪಟ್ಟರು.
ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿರುವ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಕಾವೇರಿ 2.0 ಆನ್‌ಲೈನ್ ತಂತ್ರಾಂಶ ಉದ್ಘಾಟಿಸಿ ಮಾತನಾಡಿದ ಅವರು, ಚನ್ನರಾಯಪಟ್ಟಣದಲ್ಲಿ ಅತಿ ಹೆಚ್ಚು ನೋಂದಣಿ ವ್ಯವಹಾರ ನಡೆಯುತ್ತಿದ್ದು, ಅತಿ ಹೆಚ್ಚು ಜನಸಂದಣಿ ಇರುತ್ತಿತ್ತು. ಇದೀಗ ’ಕಾವೇರಿ- 2.0’ ತಂತ್ರಾಂಶದಿಂದ ನಾಗರಿಕರು ಸರಳ ವಿಧಾನದಲ್ಲಿ ಅಗತ್ಯ ಮಾಹಿತಿಗಳೊಂದಿಗೆ ಉದೇಶಿತ ಆಸ್ತಿಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಶುಲ್ಕ ಪಾವತಿಸಿ ನಿರ್ದಿಷ್ಟ ಸಮಯ ಗೊತ್ತುಪಡಿಸಿಕೊಂಡು ನೋಂದಣಿ ಮಾಡಿಕೊಳ್ಳಬಹುದು. ಕಚೇರಿಗೆ ಪದೇ ಪದೆ ಅಲೆಯುವುದು ತಪ್ಪಲಿದೆ ಎಂದರು.
ಜಿಲ್ಲಾ ನೋಂದಣಾಧಿಕಾರಿ ಶ್ರೀನಿಧಿ ಮಾತನಾಡಿ, ಕಾವೇರಿ- 2.0’ ತಂತ್ರಾಂಶದಿಂದ ಸ್ಥಿರಾಸ್ತಿ, ಚರಾಸ್ತಿ ದಸ್ತಾವೇಜು, ನೋಂದಣಿ ಪ್ರಕ್ರಿಯೆಯನ್ನು ಸುರಕ್ಷತಾ ಕ್ರಮಗಳ ಜತೆಗೆ 10 ನಿಮಿಷದಲ್ಲೇ ಪೂರ್ಣಗೊಳಿಸಿ ನೋಂದಣಿ ದಾಖಲೆ ಪಡೆಯಲು ಸಾಧ್ಯವಾಗುತ್ತದೆ. ಬಳಕೆದಾರರೇ ಅಗತ್ಯ ವಿವರ, ದಾಖಲೆ ಅಪ್‌ಲೋಡ್ ಮಾಡಿ ಶುಲ್ಕ ಪಾವತಿಸಿ ನಿರ್ದಿಷ್ಟ ಸಮಯ ಗೊತ್ತುಪಡಿಸಿಕೊಂಡು ನೋಂದಣಿಗೆ ಸಮಯ ನಿಗದಿಪಡಿಸಿಕೊಳ್ಳಲು ಸಹಕಾರಿಯಾಗಿದೆ. ಕೇವಲ 10- 15 ನಿಮಿಷದಲ್ಲಿ ಇಡೀ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net