ಕಾವೇರಿ ಕೊಳ್ಳದ ಜನಪ್ರತಿನಿಧಿ ಸಭೆ ಕರೆಯಲು ಎಂಎಲ್ ಸಿ ಮರಿತಿಬ್ಬೇಗೌಡರಿಂದ ಸಿಎಂಗೆ ಒತ್ತಾಯ

maritibbegowda1-
Published on

ಮೈಸೂರು: ಕಾವೇರಿ ಕೊಳ್ಳದ ಮುಂಗಾರು ಬೆಳೆಗೆ ನೀರು ಬಿಡುಗಡೆ ಮಾಡುವ ಸಂಬಂಧ ಮುಖ್ಯಮಂತ್ರಿ ಸ್ದಿರಾಮ್ಯಯ ಅವರ ಅಧ್ಯಕ್ಷತೆಯಲ್ಲಿ ಸಭೆ ಕರೆಯುವಂತೆ ವಿಧಾನ ಪರಿಷತ್ತಿನ ಸದಸ್ಯ ಮರಿತಿಬ್ಬೇಗೌಡ ಆಗ್ರಹಿಸಿದ್ದಾರೆ.
ಮುಂಗಾರು ಮಳೆ ಶೇ.50ಕ್ಕಿಂತ ಕಡಿಮೆ ಬಿದ್ದಿರುವುದರಿಂದ ಕೆಆರ್‌ಎಸ್, ಹಾರಂಗಿ, ಕಬಿನಿ, ಹೇಮಾವತಿ ಜಲಾಶಯಗಳಲ್ಲಿ ನೀರು ಶೇಖರಣೆ ಕಡಿಮೆ ಅಗಿದೆ. ಇದರಿಂದ ಕಾವೇರಿ ಕೊಳ್ಳದ ಜಿಲ್ಲೆಗಲ್ಲಿ ಇರುವ ಬೆಳೆಗೆ ನೀರು ಬಿಡಲು ಸಾಧ್ಯವಾಗದೆ ಬೆಳೆ ಒಣಗುತ್ತಿವೆ. ಬಯಲು ಪ್ರದೇಶದಲ್ಲಿಯೂ ಕೆರೆಗಳು ತುಂಬದ ಅಂತರ್ಜಲ ಮಟ್ಟ ಕುಸಿದಿದ್ದು, ಜನ, ಜಾನುವಾರುಗಳ ಕುಡಿಯುವ ನೀರಿಗೂ ತೊಂದರೆ ಅಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಮಧ್ಯೆ ಕೇಂದ್ರ ನೀರಾವರಿ ಪ್ರಾಧಿಕಾರ ತಮಿಳುನಾಡಿಗೆ ನೀರು ಬಿಡುವಂತೆ ನೀಡಿರುವ ಆದೇಶವನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಆದ್ದರಿಂದ ಸಂಕಷ್ಟ ಪರಿಸ್ಥಿತಿಯನ್ನು ಗಮನಿಸಿ ಕಾವೇರಿ ಭಾಗದ ಬೆಳೆಗೆ, ಕೆರೆಗಳನ್ನು ತುಂಬಿಸುವ ಸಂಬಂಧ ಈ ಭಾಗದ ಎಲ್ಲ ಶಾಸಕರ ಸಭೆ ಕರೆಯಬೇಕು ಎಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net