ಕಾವೇರಿ ಕಾಲೇಜಿಗೆ ನ್ಯಾಕ್ ತಂಡ ಆಗಮನ

15 ಜಿಕೆಎಲ್ 02
ನ್ಯಾಕ್ ತಂಡವನ್ನು ಸಾಂಪ್ರದಾಯಿಕವಾಗಿ ಬರಮಾಡಿಕೊಂಡ ಸಂದರ್ಭ
Published on

ಗೋಣಿಕೊಪ್ಪಲು: ಇಲ್ಲಿನ ಕಾವೇರಿ ಕಾಲೇಜಿನ ವಿದ್ಯಾಸಂಸ್ಥೆಗೆ ನ್ಯಾಕ್ ಮೂರು ಜನರ ತಂಡವು ಆಗಮಿಸಿತು. ಇವರನ್ನು ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಆತ್ಮೀಯವಾಗಿ ಬರಮಾಡಿಕೊಂಡರು.

ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಇಟ್ಟಿರ ಬಿದ್ದಪ್ಪ, ಕಾರ್ಯದರ್ಶಿ ಕುಲ್ಲಚಂಡ ಬೋಪಣ್ಣ, ಪ್ರಾಂಶುಪಾಲ ಡಾ.ಕಾವೇರಪ್ಪ ಹೂಗುಚ್ಛ ನೀಡಿ ಸ್ವಾಗತಿಸಿದರು. ತಂಡವು 2 ದಿನಗಳ ಕಾಲ ಮ್ಯಾಲಾಂಕನ ನಡೆಸಲಿದೆ ಎಂದು ಕಾಲೇಜಿನ ಅಧ್ಯಕ್ಷ ಇಟ್ಟಿರ ಬಿದ್ದಪ್ಪ ತಿಳಿಸಿದರು.

ಪ್ರಾಂಶುಪಾಲ ಡಾ. ಕಾವೇರಪ್ಪ ಮಾತನಾಡಿ, ಕಾವೇರಿ ಕಾಲೇಜು 2005ರಲ್ಲಿ ಮೊದಲ ಮೌಲ್ಯಾಂಕನಕ್ಕೆ ಒಳಪಟ್ಟಿತ್ತು. ಆ ಸಂದರ್ಭ ಬಿ ಪ್ಲಸ್‌ಪ್ಲಸ್ ದೊರಕಿತ್ತು. 2011ರಲ್ಲಿ 2ನೇ ಮೌಲ್ಯಾಂಕನಕ್ಕೆ ಒಳಪಟ್ಟಂತಹ ಸಂದರ್ಭ ಎ ಶ್ರೇಣಿ ಪಡೆದಿತ್ತು. 2017ರಲ್ಲಿ 3ನೇ ಬಾರಿ ಮೌಲ್ಯಾಂಕನದಲ್ಲಿ ಹೆಚ್ಚಿನ ಅಂಕ ಪಡೆಯುವ ಮೂಲಕ ಎ ಶ್ರೇಣಿಯನ್ನು ಪಡೆದಿತ್ತು. 4ನೇ ಮೌಲ್ಯಾಂಕನಕ್ಕೆ ತಂಡವು ಆಗಮಿಸಿದೆ. ಕಾಲೇಜಿನ ಸರ್ವಾಂಗೀಣ ಪ್ರಗತಿಯನ್ನು ಪರಿಶೀಲಿಸಲಿದೆ. ಈ ಬಾರಿಯೂ ಎ ಪ್ಲಸ್ ಶ್ರೇಣಿ ಪಡೆಯುವ ವಿಶ್ವಾಸದಲ್ಲಿದ್ದೇವೆ ಎಂದರು.

ಕಾಲೇಜಿನ ಐಕ್ಯೂಎಸಿ ಸಂಯೋಜನಕರು ಪ್ರೊ.ಎಂ.ಎಸ್.ಭಾರತಿ, ಉಪ ಪ್ರಾಂಶುಪಾಲೆ ಡಾ.ಎ.ಎಸ್.ಪೂವಮ್ಮ, ಕಾಲೇಜು ಅಧೀಕ್ಷಕಿ ಟಿ.ಕೆ.ಲತಾ, ಉಪನ್ಯಾಸಕ ಎ.ಎಂ. ಪೊನ್ನಪ್ಪ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net