ಕಾವೇರಿ ಕಾಲೇಜಲ್ಲಿ ಪರಿಸರ ದಿನಾಚರಣೆ

05mdk03
Published on

ಗೋಣಿಕೊಪ್ಪ: ಮಾನವ ಮತ್ತು ಪರಿಸರ ಸಂಪೂರ್ಣವಾಗಿ ಪರಸ್ಪರ ಅವಲಂಬಿತವಾಗಿದೆ ಎಂದು ಕಾವೇರಿ ಕಾಲೇಜು ಪ್ರಾಂಶುಪಾಲ ಡಾ.ಎಂ.ಬಿ. ಕಾವೇರಪ್ಪ ಹೇಳಿದರು.


ಕಾಲೇಜಿನ ಎನ್‌ಸಿಸಿ ಘಟಕದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.


ನಮ್ಮ ವಾತಾವರಣದಲ್ಲಿ ಸ್ವಲ್ಪ ಬದಲಾವಣೆಯಾದರೆ ಅದರ ಪರಿಣಾಮ ನಮ್ಮ ದೇಹದಲ್ಲಿ ತಕ್ಷಣವೇ ಗೋಚರಿಸುತ್ತದೆ. ಚಳಿ ಜಾಸ್ತಿಯಾಗಿದ್ದರೆ ನಾವು ತಣ್ಣಗಾಗುತ್ತೇವೆ. ಶಾಖ ಹೆಚ್ಚಾದರೆ ಅದನ್ನು ಸಹಿಸಲು ಸಾಧ್ಯವಿಲ್ಲ. ಮನುಷ್ಯನಿಗೆ ಉಸಿರಾಟವೆಷ್ಟು ಮುಖ್ಯವೋ ಪರಿಸರ ಅಷ್ಟೇ ಮುಖ್ಯವಾಗಿದೆ. ಪ್ರತಿವರ್ಷವೂ ಶುದ್ಧಗಾಳಿ ಸಿಗದ ಕಾರಣ ಜನರು ಸಾಯುವಂತಾಗಿದೆ. ಪ್ರಪಂಚದಾದ್ಯಂತ ನಗರ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ಸುಧಾರಿಸಲು ಹೊಸ ಶಕ್ತಿ ಮತ್ತು ಹಸಿರು ತಂತ್ರಜ್ಞಾನಗಳನ್ನು ಅನ್ವೇಷಿಸಲು ಸರ್ಕಾರಗಳು, ಕೈಗಾರಿಕೆಗಳು ಮತ್ತು ವ್ಯಕ್ತಿಗಳನ್ನು ಒತ್ತಾಯಿಸಲು ಪ್ರತಿವರ್ಷ ವಿಶ್ವ ಪರಿಸರ ದಿನ ಆಚರಿಸಲಾಗುತ್ತದೆ ಎಂದರು.


ಕಾರ್ಯಕ್ರಮದಲ್ಲಿ 19 ಕರ್ನಾಟಕ ಬೆಟಾಲಿಯನ್ ಮಡಿಕೇರಿ ಘಟಕದ ಬೋಧಕ ಸಿಬ್ಬಂದಿ ಹವಾಲ್ದಾರ್ ಶುಭಂ, ಹವಾಲ್ದಾರ್ ದೀಪಕ್, ಎನ್‌ಸಿಸಿ ಅಧಿಕಾರಿಗಳಾದ ಲೆಫ್ಟಿನೆಂಟ್ ಅಕ್ರಂ, ಲೆಫ್ಟಿನೆಂಟ್ ಲೇಪಾಕ್ಷಿ, ಡಾ.ನಯನಾ ತಿಮ್ಮಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net