ಕಾವು ಶಾಲೆಯ ತಡೆಗೋಡೆ ಕುಸಿತ

rain damage
ಕಾವು ಸರ್ಕಾರಿ ಶಾಲೆಯ ತಡೆಗೋಡೆ ಪಕ್ಕದ ಬಸ್ ಪ್ರಯಾಣಿಕರ ತಂಗುದಾಣದ ಮೇಲೆ ಬಿದ್ದಿದೆ.
Published on

ಪುತ್ತೂರು ಗ್ರಾಮಾಂತರ: ಅರಿಯಡ್ಕ ಗ್ರಾಪಂ ವ್ಯಾಪ್ತಿಯ ಮಾಡ್ನೂರು ಗ್ರಾಮದ ಕಾವು ಎಂಬಲ್ಲಿ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಕಾವು ಸರ್ಕಾರಿ ಶಾಲೆಯ ತಡೆಗೋಡೆ ಗುರುವಾರ ಮಧ್ಯಾಹ್ನ 11.45ರ ಕುಸಿದು ಬಿದ್ದಿದೆ. ತಡೆಗೋಡೆಯ ಕಲ್ಲುಗಳು ಕುಸಿದು ಪಕ್ಕದಲ್ಲಿನ ಪ್ರಯಾಣಿಕರ ತಂಗುದಾಣದ ಮೇಲೆ ಬಿದ್ದು ಹಾನಿಯಾಗಿದೆ. ತಂಗುದಾಣದಲ್ಲಿದ್ದ ವ್ಯಕ್ತಿಯೊಬ್ಬರು ಓಡಿ ಹೋಗಿ ಅಪಾಯದಿಂದ ಪಾರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net