

ಚಿತ್ರದುರ್ಗ: ನಗರದ ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ ಅಸು ನೀಗಿದವರ ಸಂಖ್ಯೆ ಮೂರಕ್ಕೆ ಏರಿದೆ. ಚಿತ್ರದುರ್ಗ ತಾಲೂಕು ವಡ್ಡರಸಿದ್ದವ್ವನಹಳ್ಳಿ ಗ್ರಾಮದ ಪ್ರವೀಣ್(25)ದಾವಣಗೆರೆ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಮೃತಪಟ್ಟಿದ್ದಾನೆ.
ಸಂಬಂಧಿಕರ ಮನೆಗೆ ಬಂದಿದ್ದ ಪ್ರವೀಣ್,ಸೋಮವಾರದಿಂದ ವಾಂತಿಬೇಧಿಯಿಂದ ಬಳಲು ಆರಂಭಿಸಿದ್ದ. ಸಾವಿನ ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆ ಸಾಧ್ಯತೆ ಇದೆ.
ಅಸ್ವಸ್ಥರ ಸಂಖ್ಯೆ 98ಕ್ಕೆ ಏರಿದೆ. 70 ಜನರು ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲಾಡಳಿತದ ಮನವೊಲಿಕೆ ಬಳಿಕ ಮೃತ ಮಂಜುಳಾ ಅವರ ಹಾಗೂ ಬೆಂಗಳೂರಲ್ಲಿ ಮೃತಪಟ್ಟಿದ್ದ ರಘು ಅವರ ಅಂತಿಮ ಸಂಸ್ಕಾರ ನೇರವೇರಿದೆ.
ಪ್ರತಿಭಟನೆ
ಕವಾಡಿಗರಹಟ್ಟಿ ಘಟನೆಯನ್ನು ಖಂಡಿಸಿ ಕರುನಾಡು ವಿಜಯ ಸೇನೆ ಕಾರ‌್ಯಕರ್ತರು ನಗರಸಭೆ ಆಯುಕ್ತ ಶ್ರೀನಿವಾಸ್ ಅವರನ್ನು ಬಂ ಧಿ ಸುವಂತೆ ಒತ್ತಾಯಿಸಿ ನಗರಸಭೆ ಎದುರು ಪ್ರತಿಭಟಿಸಿದ್ದಾರೆ.
ಅಗತ್ಯ ನೆರವು
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ‌್ಯದರ್ಶಿ,ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ವಿಜಯ್ ಆಸ್ಪತ್ರೆಗೆ ಭೇಟಿ ನೀಡಿದ್ದರು. ಅಸ್ವಸ್ಥ ಗೊಂಡವರ ಯೋಗಕ್ಷೇಮ ವಿಚಾರಿಸಿದ ಅವರು,ಮೃತಪಟ್ಟಿರುವ ಮಂಜುಳಾ ಅವರ ಮಗಳಿಗೆ ಜಿಲ್ಲಾ ಮಕ್ಕಳ ಕ ಲ್ಯಾಣ ಸಮಿತಿಯಿಂದ ಅಗತ್ಯ ನೆರವು ನೀಡಲಾಗುವುದು. ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನೂ ತಲುಪಿಸಲಾಗುವುದೆಂದು ತಿಳಿಸಿದರು.
ವೈಯುಕ್ತಿಕ ನೆರವು
ಮೃತರ ಅವರ ನೊಂದ ಕುಟುಂಬಗಳಿಗೆ ಎಂಎಲ್‌ಸಿ ಕೆ.ಎಸ್.ನವೀನ್ ವೈಯುಕ್ತಿಕವಾಗಿ ತಲಾ 50 ಸಾವಿರ ರೂ.ನೆರವಿನ ಚೆಕ್‌ನ್ನು ನೀಡಿದರು.