ಕಾಳಿಕಾಪುರದಲ್ಲಿ ಮದ್ಯದಂಗಡಿಗೆ ವಿರೋಧ; ಸರ್ಕಾರದ ವಿರುದ್ಧ ಗ್ರಾಮಸ್ಥರ ಆಕ್ರೋಶ

HOS WEB
Published on

ಹೊಸನಗರ: ತಾಲೂಕಿನ ಕಾಳಿಕಾಪುರ ಗ್ರಾಮದಲ್ಲಿ ಎಂಎಸ್‌ಐಎಲ್ ಮದ್ಯದ ಅಂಗಡಿ ತೆರೆಯುವುದನ್ನು ವಿರೋಧಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಮದ್ಯದ ಅಂಗಡಿ ಆಂಭಿಸಲು ಉದ್ದೇಶಿದಿರುವ ಕಟ್ಟಡದ ಬಳಿ ಪ್ರತಿಭಟನೆ ನಡೆಸಿದ ಸ್ಥಳೀಯರು, ಯಾವುದೇ ಕಾರಣಕ್ಕೂ ನಮ್ಮ ಗ್ರಾಮದಲ್ಲಿ ಮದ್ಯದ ಅಂಗಡಿ ತೆರೆಯಲು ಅವಕಾಶ ಕೊಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜೇನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಜನರು ಕೃಷಿ ಕಾರ್ಮಿಕರು ಹಾಗೂ ಬಡ ರೈತರಿದ್ದಾರೆ. ಗ್ರಾಮ ಹಿಂದುಳಿದ ಪ್ರದೇಶವಾಗಿದೆ. ಅಕ್ಕಪಕ್ಕದಲ್ಲಿ ಹೈಸ್ಕೂಲ್ ಮತ್ತು ಪ್ರಾಥಮಿಕ ಶಾಲೆಗಳು ನಡೆಯುತ್ತಿದೆ. ಇಲ್ಲಿ ಅಂಗಡಿ ತೆರೆದರೆ ಕುಡುಕರು ಬಂದು ಮೋಜುಮಸ್ತಿ ಮಾಡುತ್ತಾರೆ. ಇದರಿಂದ ಗ್ರಾಮದ ಶಾಂತಿ ಹಾಳಾಗುತ್ತದೆ. ಸ್ಥಳೀಯರ ವಿರೋಧದ ನಡುವೆಯು ಮದ್ಯ ಮಾರಾಟಕ್ಕೆ ಪರವಾನಗಿ ನೀಡಿದರೆ ಅಬಕಾರಿ ಕಚೇರಿಯ ಮುಂದೆ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.

ಅಬಕಾರಿ ಇಲಾಖೆ ಸಹಾಯಕ ನಿರೀಕ್ಷಕರಾದ ವಾಸವಿ ಮತ್ತು ಉಮೇಶ್ ಸ್ಥಳಕ್ಕೆ ಭೇಟಿ ನೀಡಿ ಮನವಿಪತ್ರ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net