ಕಾಳಿಕಾದೇವಿಗೆ ಉಡಿತುಂಬಿದ ರೈತರು

Published on

ಕೆಂಭಾವಿ: ಪಟ್ಟಣದ ಕಾಳಿಕಾ ದೇವಸ್ಥಾನದಲ್ಲಿ ದೇವಿಗೆ ಉಡಿ ತುಂಬುವ ಕರ‍್ಯಕ್ರಮ ಶುಕ್ರವಾರ ರೈತರು ಸಂಭ್ರಮದಿAದ ನೆರವೇರಿಸಿದರು. ಬಿತ್ತನೆಗೆ ಚಾಲನೆ ನೀಡುವ ಮುನ್ನ ರೈತರು ದೇವಿಗೆ ಬಿತ್ತನೆ ಬೀಜ ದೇವಿಗೆ ಉಡಿ ತುಂಬುದುವು ಇಲ್ಲಿನ ವಾಡಿಕೆಯಾಗಿದೆ.

ಗೋಧಿ, ಜೋಳ, ಸಜ್ಜಿ, ಶೇಂಗಾ, ತೊಗರಿ, ಎಳ್ಳು ಹೀಗೆ ತಮ್ಮ ಹೊಲದಲ್ಲಿ ಬಿತ್ತುವ ಹಲವು ಬಗೆಯ ಬೀಜಗಳನ್ನು ಮೊದಲೇ ಸಂಗ್ರಹಿಸಿಟ್ಟುಕೊAಡು ಆ ಬೀಜಗಳಿಂದ ಕಾಳಿಕಾದೇವಿಗೆ ಮೊದಲು ಉಡಿ ತುಂಬಲಾಗುತ್ತದೆ. ಗುರುವಾರ ಅಹೋರಾತ್ರಿ ಭಜನೆ, ಸಂಗೀತ ಸೇವೆ, ಪುರಾಣ ಸೇರಿ ವಿವಿಧ ಧಾರ್ಮಿಕ ಕರ‍್ಯಕ್ರಮ ಜರುಗಿದವು. ಶುಕ್ರವಾರ ಬೆಳಿಗ್ಗೆ ಅರ್ಚಕ ಈರಣ್ಣ ಪತ್ತಾರ ನೇತೃತ್ವದಲ್ಲಿ ದೇವಿಗೆ ವಿಶೇಷ ಪೂಜೆ, ಅಭಿಷೇಕ, ದೇವಿಗೆ ಉಡಿ ತುಂಬುವುದು, ೧೦೧ ಮುತೈದೆಯರಿಗೆ ಉಡಿ ತುಂಬಲಾಯಿತು.


ತೋಟಪ್ಪ ಪೂಜಾರಿ, ಬಾಳುರಾವ ಕುಲಕರ್ಣಿ, ವಾಮನರಾವ ದೇಶಪಾಂಡೆ, ಅರುಣೋದಯ ಸೊನ್ನದ, ಗುರುಮೂರ್ತಿ ಪತ್ತಾರ, ಮಹಿಪಾಲರೆಡ್ಡಿ ಡಿಗ್ಗಾವಿ, ಮುದಕಣ್ಣ ಹುಣಸಗಿ, ಕಾಂತರೆಡ್ಡಿ ಡಿಗ್ಗಾವಿ, ನರಸಿಂಹರಾವ ಕುಲಕರ್ಣಿ, ಹಣಮಂತರಾವ ಕುಲಕರ್ಣಿ, ಮಲ್ಲನಗೌಡ ಪಾಟೀಲ್, ಸಿದ್ದಪ್ಪ ಹುಣಚ್ಯಾಳ, ನಿಂಗಪ್ಪ ಜಲಪುರ, ವಿಜಯಚಾರ್ಯ ಪುರೋಹಿತ, ಬಲಭೀಮ ಕವಲ್ದಾರ, ಮಲ್ಲಿಕಾರ್ಜುನ ಬಡಿಗೇರ ಇತರರಿದ್ದರು.‘


ತೋಟಪ್ಪ ಪೂಜಾರಿ, ಬಾಳುರಾವ ಕುಲಕರ್ಣಿ, ವಾಮನರಾವ ದೇಶಪಾಂಡೆ, ಅರುಣೋದಯ ಸೊನ್ನದ, ಗುರುಮೂರ್ತಿ ಪತ್ತಾರ, ಮಹಿಪಾಲರೆಡ್ಡಿ ಡಿಗ್ಗಾವಿ, ಮುದಕಣ್ಣ ಹುಣಸಗಿ, ಕಾಂತರೆಡ್ಡಿ ಡಿಗ್ಗಾವಿ, ನರಸಿಂಹರಾವ ಕುಲಕರ್ಣಿ, ಹಣಮಂತರಾವ ಕುಲಕರ್ಣಿ, ಮಲ್ಲನಗೌಡ ಪಾಟೀಲ್, ಸಿದ್ದಪ್ಪ ಹುಣಚ್ಯಾಳ, ನಿಂಗಪ್ಪ ಜಲಪುರ, ವಿಜಯಚಾರ್ಯ ಪುರೋಹಿತ, ಬಲಭೀಮ ಕವಲ್ದಾರ, ಮಲ್ಲಿಕಾರ್ಜುನ ಬಡಿಗೇರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net