ಒಂದುವರೆಗೆ ದಿನ ಕಾರ್ಯಾಚರಣೆ ಮಾಡಿ ಕಾಳಿಂಗ ಸರ್ಪ ರಕ್ಷಣೆ

5KWR6
Published on

ಕಾರವಾರ : ತನ್ನ ಆಹಾರವಾದ ಕೇರೆ ಹಾವು ಬೆನ್ನಟ್ಟಿ ಬಂದು ಬಾವಿಗೆ ಬಿದ್ದ ಕಾಳಿಂಗ ಸರ್ಪವನ್ನು ಕುಮಟಾದ ಉರಗ ತಜ್ಞ ಸ್ನೇಕ್‌ ಪವನ್‌ ನಿರಂತರ ಒಂದುವರೆ ದಿನ ಶ್ರಮಪಟ್ಟು, 6 ಬಾರಿ ಬಾವಿಗೆ ಇಳಿದು ರಕ್ಷಣೆ ಮಾಡಿದ್ದಾರೆ.
ಸಿದ್ದಾಪುರ ತಾಲೂಕಿನ ಲಕ್ಕಿಸವಲು ಗ್ರಾಮದ ಗಂಗಾಧರ ಗೌಡ ಅವರ ಮನೆಯ 25 ಅಡಿ ಆಳದ ಬಾವಿಯಲ್ಲಿ ಸುಮಾರು 10 ಅಡಿ ಉದ್ದದ ಕಾಳಿಂಗ ಸರ್ಪ ಬಿದ್ದಿರುವುದು ಬುಧವಾರ ಗಮನಕ್ಕೆ ಬಂದಿತ್ತು. 65 ಕಿಮೀ ದೂರದ ಕುಮಟಾದಿಂದ ಆಗಮಿಸಿದ ಉರಗ ತಜ್ಞ ಸ್ನೇಕ್‌ ಪವನ್‌ 6 ಬಾವಿ ಬಾರಿ ಬಾವಿಗೆ ಇಳಿದು ಹಾವು ಹಿಡಿಯಲು ಪ್ರಯತ್ನಿಸಿದರು ಆದರೂ ಸಿಕ್ಕಿರಲಿಲ್ಲ. ಗುರುವಾರ ಮತ್ತೆ ಆಗಮಿಸಿದ ಅವರು ಗ್ರೀನ್ ಮೆಸ್‌ನಲ್ಲಿ ಹಾವನ್ನು ಯಶಸ್ವಿಯಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಪವನ್‌ ಕಾರ್ಯಾಚರಣೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net