ಕಾಳಗಿಯಲ್ಲಿ ರೌದ್ರಾವತಿ ಆರತಿ ೨೦ರಂದು

gangarathi
Published on

ಕಲಬುರಗಿ: ಕಾಳಗಿ ತಾಲೂಕಿನ ನೀಲಕಂಠ ಕಾಳೇಶ್ವರ ದೇವಸ್ಥಾನದಲ್ಲಿ ಏ.೨೦ರಂದು ಸಂಜೆ ೬ಕ್ಕೆ ರೌದ್ರಾವತಿ ಆರತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ದಕ್ಷಿಣಕಾಶಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಸದಸ್ಯ ಸಂತೋಷ ಪತಂಗೆ, ಮುಖಂಡ ರಾಜೇಶ ಗುತ್ತೇದಾರ್ ತಿಳಿಸಿದರು. ಅಂದು ಬೆಳಗ್ಗೆ ೬ಕ್ಕೆ ನೀಲಕಂಠ ಕಾಳೇಶ್ವರಗೆ ರುದ್ರಾಭಿಷೇಕ, ಸಂಜೆ ೬ಕ್ಕೆ ಹೊನ್ನಕಿರಣಗಿ ಶ್ರೀ ಚಂದ್ರಗುAಡ ಶಿವಾಚಾರ್ಯ ನೇತೃತ್ವ ಮತ್ತು ಶ್ರೀ ನೀಲಕಂಠ ಮರಿದೇವರ ಸಾನ್ನಿಧ್ಯದಲ್ಲಿ ರೌದ್ರಾವತಿ ಆರತಿ ಜರುಗಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಕೋರಿದರು. ಬಿ.ಎಸ್.ಪ್ಯಾಟಿಮಠ, ರಾಘವೇಂದ್ರ ಗುತ್ತೇದಾರ್, ಗಂಡಪ್ಪ ಕರೆಮನೋರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net