

ಕಾಳಗಿ: ತಾಲೂಕಿನಲ್ಲಿ ವಿವಿಧ ಆಡಳಿತ ಕಚೇರಿಗಳನ್ನು ಕೂಡಲೇ ಪ್ರಾರಂಭಿಸುವಂತೆ ಒತ್ತಾಯಿಸಿ ತಹಸೀಲ್ದಾರ್ ಕಾರ್ಯಾಲಯದ ಮುಂದೆ ದಲಿತ ಸೇನೆಯಿಂದ ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಿ ತಹಸೀಲ್ದಾರಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆ ಉದ್ದೇಶಿಸಿ ಕಾಳಗಿ ತಾಲೂಕು ದಲಿತ ಸೇನೆ ಅಧ್ಯಕ್ಷ ಖತಲಪ್ಪ ಅಂಕನ ಮಾತನಾಡಿ, ನೂತನ ತಾಲೂಕು ರಚನೆಯಾಗಿ ವರ್ಷಗಳೆ ಊರುಳುತ್ತಿವೆ. ತಾಲೂಕು ಆಡಳಿತ ಕಚೇರಿಗಳು ಇಲ್ಲದೆ. ಜನ ಸಾಮಾನ್ಯರು ನಿತ್ಯ ಪರಿತಪಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ತಾಲೂಕು ಆಡಳಿತ ಕಚೇರಿಗಳು, ನ್ಯಾಯಾಲಯ ಸ್ಥಾಪಿಸಬೇಕು. ಸಂತೆ ಮಾರುಕಟ್ಟೆ ಆರಂಭಿಸಬೇಕು. ಕಾಳಗಿ ಪಟ್ಟಣದಲ್ಲಿ ಉದ್ಯಾನವನ ನಿರ್ಮಿಸಬೇಕು. ಕಣಸೂರ, ಗೋಟೂರ ಮಧ್ಯ ಇರುವ ಹಳೆಯ ಬ್ರೀಜನ್ನು ಮೇಲ್ದರ್ಜೆಗೆ ಏರಿಸಬೇಕು ಎಂಬುದು ಸೇರಿ 32ಕ್ಕೂ ಅಧಿಕ ಬೇಡಿಕೆಗಳ ಮನವಿಯನ್ನು ತಹಸೀಲ್ದಾರ್ ಘಮಾವತಿ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು.
ಈ ಹೋರಾಟದಲ್ಲಿ ನಾಗರಾಜ ಬೇವಿನಕರ್, ಮೋಹನ್ ಚಿನ್ನ, ಸಿದ್ದು ಗೋಟೂರ, ಖಯುಮ್ ಖುರೇಷಿ, ಹಣಮಂತ ಕಲಗುರ್ತಿ, ಮೀರಾಜ ಪಟೇಲ್, ಆಕಾಶ ಹೆಬ್ಬಾಳ, ಕಪಿಲ್ ಚಿಂಚೋಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.