ಕಾಳಗಿ ಪಟ್ಟಣ ಪಂಚಾಯಿತಿ ಚುನಾವಣೆ ೧೭ಕ್ಕೆ

29Kalagi01
ಕಾಳಗಿ ಪಟ್ಟಣ ಪಂಚಾಯಿತಿ ಚುನಾವಣೆ ಕುರಿತು ಚುನಾವಣಾಧಿಕಾರಿ ಡಾ.ಬಸವಲಿಂಗಪ್ಪ ಡಿಗ್ಗಿ ಮಾಹಿತಿ ನೀಡಿದರು. ತಹಸೀಲ್ದಾರ್ ಪೃಥ್ವಿರಾಜ ಪಾಟೀಲ ಇದ್ದರು.
Published on

ಕಾಳಗಿ: ಪಟ್ಟಣ ಪಂಚಾಯಿತಿ ಪ್ರಥಮ ಸಾರ್ವತ್ರಿಕ ಚುನಾವಣೆ ಆ.೧೭ರಂದು ನಡೆಯಲಿದ್ದು, ಜು.೨೯ರಿಂದಲೇ ನೀತಿ ಸಂಹಿತೆ ಜಾರಿಯಾಗಿದೆ ಎಂದು ಚುನಾವಣಾಧಿಕಾರಿ ಡಾ.ಬಸವಲಿಂಗಪ್ಪ ಡಿಗ್ಗಿ ಹೇಳಿದರು.

ಕರ್ನಾಟಕ ಪೌರಸಭೆ ನಿಯಮ ಪ್ರಕಾರ ಜಿ¯್ಲÁಧಿಕಾರಿ ಆದೇಶದಂತೆ ಪಪಂ ೧೧ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಆ.೫ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ಅಭ್ಯರ್ಥಿಗಳು ರಜಾ ದಿನ ಹೊರತುಪಡಿಸಿ ಬೆಳಗ್ಗೆ ೧೧ರಿಂದ ಮಧ್ಯಾಹ್ನ ೩ರವರೆಗೆ ತಾಪಂ ಕಚೆರಿಯಲ್ಲಿ ಉಮೇದುವಾರಿಕೆ ಸಲ್ಲಿಸಬಹುದು. ೬ರಂದು ಬೆಳಗ್ಗೆ ೧೧ಕ್ಕೆ ನಾಮಪತ್ರ ಪರಿಶೀಲನೆ, ೮ರಂದು ಉಮೇದುವಾರಿಕೆ ಹಿಂಪಡೆಯಲು ಅವಕಾಶವಿದದೆ. ೧೭ರಂದು ಬೆಳಗ್ಗೆ ೭ರಿಂದ ಸಂಜೆ ೫ರವರೆಗೆ ಮತದಾನ, ಅಗತ್ಯವಿದ್ದಲ್ಲಿ ೧೯ರಂದು ಮರು ಮತದಾನ ನಡೆಯಲಿದೆ. ೨೦ರಂದು ತಾಲೂಕು ಕೇಂದ್ರದಲ್ಲಿಯೇ ಬೆಳಗ್ಗೆ ೮ರಿಂದ ಮತ ಎಣಿಕೆ ಪ್ರಾರಂಭವಾಗಲಿದೆ ಎಂದು ತಿಳಿಸಿದರು.

೧೧ ವಾರ್ಡ್ಗಳಿಗೆ ಮೀಸಲಾತಿ ಪ್ರಕಟವಾಗಿದ್ದು, ವಿವರ ಹೀಗಿದೆ. ವಾರ್ಡ್ ೧(ಇಳಿಗೇರ ಗಲ್ಲಿ)- ಸಾಮಾನ್ಯ. ೨ (ಮಲ್ಲಿಕಾರ್ಜುನ ಗುಡಿ ಏರಿಯಾ)- ಸಾಮಾನ್ಯ. ೩ (ಬಸವೇಶ್ವರ ಗುಡಿ ಏರಿಯಾ)- ಸಾಮಾನ್ಯ ಮಹಿಳೆ. ೪ (ಕುರುಬರ ಗಲ್ಲಿ)- ಪರಿಶಿಷ್ಟ ಪಂಗಡ. ೫ (ಬಡಿಗೇರ ಕಟ್ಟಿ)- ಸಾಮಾನ್ಯ. ೬ (ಬೇಗರ ಗಲ್ಲಿ)- ಸಾಮಾನ್ಯ ಮಹಿಳೆ. ೭ (ರಾಮನಗರ ಗಲ್ಲಿ)- ಪರಿಶಿಷ್ಟ ಜಾತಿ. ೮ (ಪೊಲೀಸ್ ಸ್ಟೇಷನ್ ಏರಿಯಾ)- ಸಾಮಾನ್ಯ ಮಹಿಳೆ. ೯ (ಲಚ್ಚುನಾಯ್ಕ ಮತ್ತು ಸುಬ್ಬು ನಾಯ್ಕ ತಾಂಡ)- ಪರಿಶಿಷ್ಟ ಜಾತಿ ಮಹಿಳೆ. ೧೦ (ನಾಮು ನಾಯ್ಕ ಮತ್ತು ಕಿಂಡಿ ತಾಂಡ)- ಪರಿಶಿಷ್ಟ ಜಾತಿ ಹಾಗೂ ವಾರ್ಡ್ ೧೧ (ಕರಿಕಲï ತಾಂಡ ಮತ್ತು ದೇವಿಕಲ್ಲ ತಾಂಡಾ)- ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದೆ ಎಂದು ಚುನಾವಣಾಧಿಕಾರಿ ಡಾ.ಬಸವಲಿಂಗಪ್ಪ ಡಿಗ್ಗಿ ವಿವರಿಸಿದರು. ತಹಸೀಲ್ದಾರ್ ಪೃಥ್ವಿರಾಜ ಪಾಟೀಲ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net