ಕಾಳಗಿ ಗ್ರಾಪಂ ಕಾಂಗ್ರೆಸ್ ಪಕ್ಷ ಬೆಂಬಲಿತರಿಗೆ ಗೆಲುವು

Kalagi village is a victory for Congress party supporters
ಮುದ್ದೇಬಿಹಾಳ ತಾಲೂಕು ಕಾಳಗಿ ಗ್ರಾಪಂ ನೂತನ ಅಧ್ಯಕ್ಷರಾಗಿ ನಾಗಮ್ಮ ಹಳ್ಳದ, ಉಪಾಧ್ಯಕ್ಷರಾಗಿ ದುರಗವ್ವ ಮಾದರ ಆಯ್ಕೆಯಾದ ಹಿನ್ನೆಲೆ ಬೆಂಬಲಿಗರೊಂದಿಗೆ ವಿಜಯೋತ್ಸವ ಆಚರಿಸಿದರು. ಗ್ರಾಪಂ ಮಾಜಿ ಅಧ್ಯಕ್ಷ ಜಾವೀದ ಇನಾಮದಾರ, ಮುಖಂಡ ಸಂತೋಷ ಚವ್ಹಾಣ ಇತರರು ಇದ್ದರು.
Published on

ಮುದ್ದೇಬಿಹಾಳ: ತಾಲೂಕಿನ ಕಾಳಗಿ ಗ್ರಾಪಂನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಸೋಮವಾರ ಚುನಾವಣೆ ನಡೆಯಿತು.

ನೂತನ ಅಧ್ಯಕ್ಷರಾಗಿ ನಾಗಮ್ಮ ಸಿದ್ದಪ್ಪ ಹಳ್ಳದ, ಉಪಾಧ್ಯಕ್ಷರಾಗಿ ದುರಗವ್ವ ಬಸಲಿಂಗಪ್ಪ ಮಾದರ ತಲಾ ಎಂಟು ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಜೆ.ಎಸ್. ಜೇವಣಗಿ ಘೋಷಣೆ ಮಾಡಿದರು.

ಗ್ರಾಪಂ ಮಾಜಿ ಅಧ್ಯಕ್ಷ ಜಾವೀದ ಇನಾಮದಾರ ಮಾತನಾಡಿ, ಚುನಾವಣೆಯಲ್ಲಿ ಜಯಶಾಲಿಯಾದ ನೂತನ ಅಧ್ಯಕ್ಷ, ಉಪಾಧ್ಯಕ್ಷರು ಗ್ರಾಪಂನ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ಪಡೆದು ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು ಎಂದರು.

ಹದಗೆಟ್ಟ ಕಾಳಗಿ ಹುಲ್ಲೂರ ರಸ್ತೆ ದುರಸ್ತಿಯ ಕುರಿತು ಶಾಸಕ ಅಪ್ಪಾಜಿ ನಾಡಗೌಡರ ಗಮನಕ್ಕೆ ತಂದಿದ್ದು ಶೀಘ್ರದಲ್ಲೇ ರಸ್ತೆ ಕಾಮಗಾರಿಗೆ ಶಾಸಕರು ಚಾಲನೆ ನೀಡಲಿದ್ದಾರೆ ಎಂದರು.

ಯುವ ಮುಖಂಡ ಸಂತೋಷ ಚವ್ಹಾಣ ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಸನ್ಮಾನಿಸಿದರು. ಗ್ರಾಪಂ ಸದಸ್ಯರಾದ ಸತೀಶ ರಾಠೋಡ, ರೇಣುಕಾ ಚವ್ಹಾಣ, ಗೀತಾ ನಾಯಕ, ಸವಿತಾ ಗುಬಚಿ, ಹಣಮಗೌಡ ಭೂತಲ, ಅನಸುಬಾಯಿ ಚವ್ಹಾಣ, ಕಾಂಗ್ರೆಸ್ ಪಕ್ಷದ ಮುಖಂಡರಾದ ಚಂದ್ರಕಾಂತ ಅಂಬಿಗೇರ, ಕಮಲಪ್ಪ ಉಂಡಿ, ಗೋಪಾಲ ಚವ್ಹಾಣ, ಆಸ್ಪಾಕ್ ಮುಲ್ಲಾ, ಮೋತಿಲಾಲ್ ಮ್ಯಾಗೇರಿ, ರಾಜು ನಾಯಕ ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net