ಕಾಲ್ತುಳಿತ ಮರೆಮಾಚಲು ಜಾತಿಗಣತಿ ಗೊಂದಲ

Yashpal A. Suvarna
Published on

ಕಲಬುರಗಿ: ಆರ್​ಸಿಬಿ ವಿಜಯೋತ್ಸವವನ್ನು ತರಾತುರಿಯಲ್ಲಿ ರ‍್ಪಡಿಸಿ, ತಮ್ಮ ಪ್ರಚಾರದ ತೆವಲಿಗೆ ೧೧ ಜೀವಗಳನ್ನು ರಾಜ್ಯ ಕಾಂಗ್ರೆಸ್​ ರ‍್ಕಾರ ಬಲಿ ಪಡೆದಿದ್ದು, ಅದರಿಂದ ಜನರ ಮನಸ್ಸನ್ನು ದಿಕ್ಕು ತಪ್ಪಿಸಲು ಜಾತಿಗಣತಿ ವಿಷಯ ಮುನ್ನಲೆಗೆ ತಂದಿದ್ದಾರೆ ಎಂದು ಬಿಜೆಪಿ ಹಿಂದುಳಿದ ರ‍್ಗಗಳ ಮರ‍್ಚಾ ರಾಷ್ಟ್ರೀಯ ಪ್ರಧಾನ ಕರ‍್ಯರ‍್ಶಿ, ಶಾಸಕ ಯಶಪಾಲ ಸುರ‍್ಣ ಆರೋಪಿಸಿದರು.

ಈಗಾಗಲೇ ನೂರಾರು ಕೋಟಿ ರೂ. ರ‍್ಚು ಮಾಡಿ ಸಿದ್ದರಾಮಯ್ಯ ಮುಖ್ಯಮಂತ್ರಿ ಇದ್ದಾಗಲೇ ನೇಮಿಸಿದ್ದ ಆಯೋಗದಿಂದ ಜಾತಿ ಗಣತಿ ಮಾಡಿಸಲಾಗಿದೆ. ಇದೀಗ ಪುನ@ ಗಣತಿ ಹೆಸರು ಹೇಳಿ, ಜನರಿಗೆ ಮೋಸ ಮಾಡುತ್ತಿದ್ದಾರೆ. ಇವರಿಗೆ ತರ‍್ಕಿಕ ಅಂತ್ಯ ಹಾಡುವ ಉದ್ದೇಶವಿಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಕಿಡಿ ಕಾರಿದರು.

ಆರ್​ಸಿಬಿ ವಿಜಯೋತ್ಸವದಲ್ಲಿ ರ‍್ಕಾರದ ತಪ್ಪಿನಿಂದ ಕಾಲ್ತುಳಿತವಾಗಿದೆ. ಘೋರ ಅಪರಾಧವಾಗಿದ್ದು, ಅದನ್ನು ಮರೆ ಮಾಚಲು ಜಾತಿಗಣತಿ ತಂದಿದ್ದಾರೆ. ರಾಜ್ಯ ಸಚಿವ ಸಂಪುಟದಲ್ಲಿ ರ‍್ನಿಣಯವಾಗಿ ಘೋಷಣೆ ಆಗಬೇಕಿದ್ದ ವಿಷಯ ದೆಹಲಿಯ ಹೈಕಮಾಂಡ್​ ನರ‍್ಧಾರ ಮಾಡುತ್ತದೆ? ರಾಜ್ಯಕ್ಕೆ ಸಂಬಂಧವೇ ಇಲ್ಲದ ವೇಣುಗೋಪಾಲ ಘೋಷಣೆ ಮಾಡುತ್ತಾರೆ. ಇದೆಲ್ಲವೂ ನೋಡಿದರೆ ರಾಜ್ಯ ರ‍್ಕಾರ ಮುನ್ನಡೆಸುತ್ತಿರುವವರಿಗೆ ಸಾರ‍್ಥ್ಯ ಇಲ್ಲ ಎಂಬುದು ಸಾಬೀತಾಗಿದ್ದು, ಕೂಡಲೇ ರಾಜೀನಾಮೆ ನೀಡಿ ಮನೆಗೆ ಹೋಗಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಓಬಿಸಿ ಮರ‍್ಚಾ ರಾಜ್ಯ ಕರ‍್ಯರ‍್ಶಿ ಅವ್ವಣ್ಣ ಮ್ಯಾಕೇರಿ ಮಾತನಾಡಿ, ಸಿದ್ದರಾಮಯ್ಯ ಜನರ ದಿಕ್ಕು ತಪ್ಪಿಸಲು ನಾಟಕ ಮಾಡುತ್ತಿದ್ದಾರೆ. ರಾಜ್ಯ ರ‍್ಕಾರಕ್ಕೆ ಜಾತಿಗಣತಿ ಮಾಡುವ ಅಧಿಕಾರವೇ ಇಲ್ಲ. ಆರ್​ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತದಿಂದ ದಿಕ್ಕು ತಪ್ಪಿಸಲು ಹಿಂದುಳಿದವರಿಗೆ ಅನ್ಯಾಯ ಮಾಡುತ್ತಿದ್ದಾರೆ. ದಯಾನಂದ ಅಂತ ಪ್ರಾಮಾಣಿಕ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ಧರ‍್ಯವಿದ್ದರೆ ಸಾವಿರಾರು ಕೋಟಿ ಮರಳು ಅಕ್ರಮಕ್ಕೆ ಸಾಥ್​ ನೀಡಿದ ಕಲಬುರಗಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಯನ್ನು ಅಮಾನತು ಮಾಡಲಿ ಎಂದು ಸವಾಲು ಹಾಕಿದರು.

ಪ್ರಮುಖರಾದ ಶರಣಪ್ಪ ತಳವಾರ, ಬಸವರಾಜ ಸಪ್ಪನಗೋಳ, ಗಿರೀಶ ಭಜಂತ್ರಿ, ಭೀರಣ್ಣ ಕಲ್ಲೂರ, ಶಶಿಧರ ಸೂಗೂರ, ಭೀಮಶೆಟ್ಟಿ ಮುಕ್ಕಾ, ಚಂದ್ರಶಾ ಹೊನಗುಂಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net