ಕಾಲ್ಕೆರೆ ಚಂದ್ರಪ್ಪ ಉತ್ತಮ ಕಲಾವಿದ

CTD 30 Namana--03
Published on

ಚಿತ್ರದುರ್ಗ: ಶಿಕ್ಷಕ ವೃತ್ತಿಯ ಜತೆ ಸಂಗೀತ ಹಾಗೂ ಜಾನಪದ ಕ್ಷೇತ್ರಕ್ಕೆ ದೊಡ್ಡ ಶಕ್ತಿಯಾಗಿದ್ದ ಟಿ.ಕಾಲ್ಕೆರೆ ಚಂದ್ರಪ್ಪ ಉತ್ತಮ ಕಲಾವಿದರಾಗಿದ್ದರು ಎಂದು ನಿವೃತ್ತ ಪ್ರಾಚಾರ್ಯ ಡಾ.ವಿ.ಬಸವರಾಜ್ ಸ್ಮರಿಸಿದರು.

ಜಿಲ್ಲಾ ಕಲಾವಿದರ ಒಕ್ಕೂಟದಿಂದ ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಶಿಕ್ಷಕ ಟಿ.ಕಾಲ್ಕೆರೆ ಚಂದ್ರಪ್ಪ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಲ್ಲ ಬಗೆಯ ಸಾಹಿತ್ಯ, ರೂಪಕಗಳಿಗೆ ರಾಗ ಸಂಯೋಜನೆ ಮಾಡುವ ದೊಡ್ಡ ಶಕ್ತಿ, ಬುದ್ಧಿವಂತಿಕೆ ಚಂದ್ರಪ್ಪ ಅವರಲ್ಲಿತ್ತು. ಸಾಂಸ್ಕೃತಿಕ ಲೋಕದ ದೊಡ್ಡ ಆಸ್ತಿ ಎಂದರೆ ತಪ್ಪಾಗಲಾರದು ಎಂದರು.

ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಂ.ವೀರೇಶ್ ಮಾತನಾಡಿ, ಹೃದಯಕ್ಕೆ ಹತ್ತಿರವಾಗುವವರು ಸಂಬಂಧಿಕರಿಗಿಂತ ಹೆಚ್ಚು. ಅಂತವರಲ್ಲಿ ಜಾನಪದ ಹಾಡುಗಾರ ಟಿ.ಕಾಲ್ಕೆರೆ ಚಂದ್ರಪ್ಪ ಒಬ್ಬರು ಎಂದು ನೆನಪಿಸಿಕೊಂಡರು.

ಸಾಮಾಜಿಕ ಹೋರಾಟಗಾರ ಆರ್.ಶೇಷಣ್ಣಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್, ಶಿಕ್ಷಣ ಇಲಾಖೆ ನಿವೃತ್ತ ನಿರ್ದೇಶಕ ಡಾ.ಎಂ.ಮಲ್ಲಣ್ಣ, ನಿವೃತ್ತ ಪ್ರಾಚಾರ್ಯ ಪ್ರೊ.ಎ.ವಿ.ನುಂಕಪ್ಪ, ಚಲನಚಿತ್ರ ನಿರ್ದೇಶಕ ಜಿ. ಶ್ರೀನಿವಾಸ್‌ಮೂರ್ತಿ, ಆಯಿತೋಳು ವಿರೂಪಾಕ್ಷಪ್ಪ, ಒ.ಮುರಾರ್ಜಿ, ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಸಿ.ಶಿವುಯಾದವ್, ಎಸ್.ವಿಜಯಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net