ಕಾಲೇಜು ಅಭಿವೃದ್ಧಿಗೆ ಪ್ರೋತ್ಸಾಹ ಅಗತ್ಯ

14npn3
Published on

ನಿಪ್ಪಾಣಿ: ಅರವತ್ತ ನಾಲ್ಕು ವರ್ಷಗಳ ಹಿಂದೆ ಕಲಿತಿರುವ ವಿದ್ಯಾರ್ಥಿಗಳು ಭಾಗವಹಿಸಿದ್ದು, ಕಾಲೇಜಿನ ಮತ್ತು ವಿದ್ಯಾರ್ಥಿಗಳ ಉತ್ತಮ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ ಎಂದು ನಿವೃತ್ತ ಪ್ರಾಚಾರ್ಯ ಡಾ.ಎಂ.ಬಿ.ಕೋಥಳೆ ಹೇಳಿದರು.

ಕೆಎಲ್‌ಇ ಸಂಸ್ಥೆಯ ನಿಪ್ಪಾಣಿ ಜಿ.ಐ.ಬಾಗೇವಾಡಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶನಿವಾರ ಹಳೆಯ ವಿದ್ಯಾರ್ಥಿಗಳ ಸಭೆಯಲ್ಲಿ ಮಾತನಾಡಿ, ಹಳೆಯ ವಿದ್ಯಾರ್ಥಿಗಳು ಕಾಲೇಜಿನ ನ್ಯಾಕ್ ಚಟುವಟಿಕೆಯ ಭಾಗವಾಗಿದ್ದು, ಅವರ ಪ್ರೋತ್ಸಾಹ ಮತ್ತು ಬೆಂಬಲ ಕಾಲೇಜಿನ ಅಭಿವೃದ್ಧಿಗೆ ಪೂರಕವಾಗಿದೆ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿ ತಮ್ಮ ಹಳೆಯ ನೆನಪು ಹಂಚಿಕೊಂಡರು. ಪ್ರಾಚಾರ್ಯ ಡಾ.ಎಂ.ಎಂ.ಹುರಳಿ ಮಾತನಾಡಿದರು. ಹಳೆಯ ವಿದ್ಯಾರ್ಥಿಗಳಾದ ಎಲ್.ಎಂ.ಗೋಧಿ, ಎಸ್.ಪಿ.ಗೋಧಿ, ಡಾ.ಕುಮಾರ ತಳವಾರ ಹಾಗೂ ಸಂಜಯ ಕದಂ ಅನಿಸಿಕೆ ಹಂಚಿಕೊಂಡರು.

ಕೆಎಲ್‌ಇ ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿಯ ಅಧ್ಯಕ್ಷ ಮಹೇಶ ಬಾಗೇವಾಡಿ, ಸದಸ್ಯ ರವೀಂದ್ರ ಶೆಟ್ಟಿ, ಹಳೇ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ಪ್ರಿಯಾಂಕಾ ಕಮತೆ ಇತರರಿದ್ದರು.

ಶಿವಲಿಂಗ ನಾಯಿಕ ಪಾರ್ಥಿಸಿದರು. ಗೀತಾ ಕಮತೆ ಸ್ವಾಗತಿಸಿದರು. ಐಕ್ಯೂಎಸಿ ಸಂಯೋಜಕ ಡಾ.ಅತುಲಕುಮಾರ ಕಾಂಬಳೆ ನ್ಯಾಕ್ ಕುರಿತು ಮಾತನಾಡಿದರು. ಉಪಪ್ರಾಚಾರ್ಯ ಡಾ.ಆರ್.ಜಿ.ಖರಾಬೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಸುನೀತಾ ಹುನ್ನರಗಿ ಅತಿಥಿಗಳನ್ನು ಪರಿಚಯಿಸಿದರು. ಸಂಪದಾ ಹೆಗಡೆ ಮತ್ತು ಶ್ರೀದೇವಿ ಮುಂಡೆ ನಿರೂಪಿಸಿದರು. ಎ.ವೈ.ಮನಿಯಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net