ಕಾಲೇಜಿಗೆ ಸೌಕರ್ಯ ಒದಗಿಸುವೆ

ydg09
Published on

ಶಹಾಪುರ: ದಿ.ಬಾಪುಗೌಡ ದರ್ಶನಾಪುರವರ ಮುಂದಾಲೋಚನೆಯಿAದ ಶೈP್ಷÀಣಿಕ ಚಟುವಟಿಕೆಗಾಗಿ ಮಿಸಲಿಟ್ಟ ೮೮ ಎಕರೆ ೧೦ ಗುಂಟೆ ಭೂಮಿ ಇಂದು ಶೈP್ಷÀಣಿಕ ವಿಕಾಸಕ್ಕೆ ಅನುಕೂಲವಾಗಿದ್ದರ ಫಲವಾಗಿ ೧೨ ಕೋಟಿ ರೂ. ವೆಚ್ಚದಲ್ಲಿ ಸರ್ಕಾರಿ ಮಾದರಿ ಪದವಿ ಕಾಲೇಜು ನಿರ್ಮಿಸಲು ಸಾಧ್ಯವಾಯಿತು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಬಸಪ್ಪ ದರ್ಶನಾಪುರ ಹೇಳಿದರು.

ಕೇಂದ್ರ ಸರ್ಕಾರದ ಮಾನವಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಮಹತ್ವಕಾಂಕ್ಷಿ ಜಿ¯್ಲೆಯ ಯೋಜನೆಯಡಿ ೧೨ ಕೋಟಿ ರೂ. ವೆಚ್ಚದಲ್ಲಿ ಇಲ್ಲಿನ ಹೊರವಲಯದಲ್ಲಿನ ಪದವಿ ಕಾಲೇಜಿಗೆ ಹೊಂದಿಕೊAಡAತಿರುವ ಸ್ಥಳದಲ್ಲಿ ನಿರ್ಮಾಣಗೊಂಡಿರುವ ಮಾದರಿ ಪದವಿ ಕಾಲೇಜಿನ ಶೈP್ಷÀಣಿಕ ಹಾಗೂ ವಿದ್ಯಾರ್ಥಿ ನಿಲಯ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.

ಕಾಲೇಜಿನಲ್ಲಿ ಉಪನ್ಯಾಸಕ ಮತ್ತು ಸಿಬ್ಬಂದಿ ಕೊರತೆ ನೀಗಿಸಲು ಪ್ರಯತ್ನಿಸುತ್ತೇನೆ, ಕಾಲೇಜಿಗೆ ಕುಡಿಯುವ ನೀರು, ಉದ್ಯಾನವನ ಸೇರಿ ವಿದ್ಯಾರ್ಥಿಗಳಿಗೆ ಶೈP್ಷÀಣಿಕವಾಗಿ ಬೇಕಾದ ಎಲ್ಲ ಮೂಲಸೌಕರ್ಯ ಒದಗಿಸಿಕೊಡಲಾಗುವುದು ಅಲ್ಲದೆ ವಸತಿ ನಿಲಯಕ್ಕಾಗಿ ಅನುದಾನ ಮಂಜೂರು ಮಾಡಿಕೊಡಲಾಗುವುದು ಎಂದರು.

ಇಲ್ಲಿನ ವಿದ್ಯಾರ್ಥಿಗಳು ನೂರಾರು ಜನರಿಗೆ ಕೆಲಸ ಕೊಡುವಂತಹ ವಿದ್ಯಾರ್ಥಿಗಳಾಗಿ ಮಾರ್ಪಾಡಾಗಬೇಕು. ಶಿP್ಷÀಣದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೂ ಮಾನ್ಯತೆ ಕೊಡಬೇಕು ಎಂದು ಉಪನ್ಯಾಸಕರಿಗೆ ಸಲಹೆ ನೀಡಿದರು.

ಪ್ರಾಚಾರ್ಯ ಸುಭಾಷಚಂದ್ರ ಕೌಲಗಿ, ಜಂಟಿ ನಿರ್ದೇಶಕ ಗೊಳ್ಳೆ ಶಿವಶರಣ ಮಾತನಾಡಿದರು. ಪ್ರಾಚಾರ್ಯ ಶರಣಬಸಪ್ಪ ದೇಸಾಯಿ, ಗುತ್ತಿಗೆದಾರ ಗೊಲಯ್ಯ ಸಿ.ಹಿರೇಮಠ, ಎಸ್.ಎಸ್.ರಾಂಪುರೆ, ಕರ್ನಾಟಕ ಗೃಹ ಮಂಡಳಿಯ ಗಿರೀಶ, ಸಹಾಯಕ ನಿರ್ದೇಶಕ ರಾಜೇಂದ್ರ ಸಿಂಧೆ ಇತರರಿದ್ದರು.
ಎಸ್.ಎಸ್.ಪಾಟೀಲ್ ಸ್ವಾಗತಿಸಿದರು. ಡಾ.ವೀರೇಶಮದ್ರ ವಂದಿಸಿದರು. ಡಾ.ಶ್ರೀಶೈಲ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net