ಕಾಲೇಜಿಗೆ ಭೇಟಿ ನೀಡಲು ಎಲ್‌ಐಸಿ ಸಮಿತಿ ರೆಡಿ

Bengaluru_Central_University_logo
Published on

ಬೆಂಗಳೂರು: ಬೆಂಗಳೂರು ನಗರ ವಿಶ್ವವಿದ್ಯಾಲಯ(ಬಿಸಿಯು) ವ್ಯಾಪ್ತಿಯಲ್ಲಿರುವ ಕಾಲೇಜುಗಳಿಗೆ ಸಂಯೋಜನೆ ನವೀಕರಿಸಲು ಸ್ಥಳೀಯ ವಿಚಾರಣಾ ಸಮಿತಿ(ಎಲ್‌ಐಸಿ) ಕಳುಹಿಸಲು ವಿವಿ ನಿರ್ಧರಿಸಿದೆ. ಅ.12ರಿಂದ 20ರ ಅವಧಿ ಮಧ್ಯೆಯಲ್ಲಿ ಸಮಿತಿಯು ಕಾಲೇಜುಗಳಿಗೆ ಭೇಟಿ ನೀಡಲಿದೆ. ಕಾಲೇಜುಗಳು ಸಮಿತಿಯನ್ನು ಯಾವುದೇ ಗ್‌ಟಿ, ಗುಚ್ಛಗಳನ್ನು ನೀಡಿ ಸ್ವಾಗತಿಸಬಾರದು ಎಂದು ವಿವಿಯು ಸ್ಪಷ್ಟವಾಗಿ ಕಾಲೇಜುಗಳಿಗೆ ಸೂಚನೆ ನೀಡಿದೆ.

ಎಲ್‌ಐಸಿ ಭೇಟಿಯ ಸಮಯದಲ್ಲಿ ಕಾಲೇಜುಗಳೇ ವಿಡೀಯೋ ಚಿತ್ರೀಕರಣ ಮಾಡಬೇಕು. ಮಾಡಿದ ವೀಡಿಯೋ ಕ್ಲಿಪ್‌ಗಳನ್ನು ಡಿವಿಡಿ ಮೂಲಕ ಭೇಟಿ ನೀಡಿದ ಎರಡು ದಿನದೊಳಗೆ ಕಳುಹಿಸಬೇಕು. ಸಮಿತಿ ಭೇಟಿ ವೇಳೆ ಕಾಲೇಜಿ ಆಡಳಿತ ಮಂಡಳಿಯ ಅಧ್ಯಕ್ಷ, ಕಾರ್ಯದರ್ಶಿಗಳು ಇರಬೇಕು. ಸಮಿತಿ ಕೇಳುವ ಅವಶ್ಯಕ ದಾಖಲೆಗಳನ್ನು ಕಾಲೇಜಿನ ಪ್ರಾಂಶುಪಾಲರು ಒದಗಿಸಬೇಕು.

ಕಾಲೇಜು ಆಡಳಿತ ಮಂಡಳಿ ಈಗಾಗಲೇ ಅಪ್‌ಲೋಡ್ ಮಾಡಲಾಗಿರುವ ಮಾಹಿತಿಯ ಸರಿಯಾಗಿದೆಯೇ ಎಂದು ಸಮಿತಿ ಪರಿಶೀಲನೆ ಮಾಡಬೇಕು. ಮೌಲ್ಯಾಂಕನ ವರದಿಯ ಮೇಲೆ ಸಮಿತಿ ಅಧ್ಯಕ್ಷ ಹಾಗೂ ಪ್ರಾಂಶುಪಾಲರು ಸಹಿ ಮಾಡಿ ವಿವಿಗೆ ಕಳುಹಿಸಿಕೊಡಬೇಕು.
ಸಮಿತಿಯು ನೀಡುವ ವರದಿಯ ಆಧಾರದ ಮೇಲೆ ಅಂತಿಮ ಕಾಲೇಜಿನ ಸ್ಕೋರ್ ಕಾರ್ಡ್ ಅನ್ನು ವಿವಿ ನೀಡಲಿದೆ. ಈ ಹಿನ್ನೆಲೆಯಲ್ಲಿ ಸಮಿತಿ ಭೇಟಿ ಸಮಯದಲ್ಲಿ ಬೇಕಾಗುವ ಸೌಲಭ್ಯಗಳನ್ನು ಕಾಲೇಜು ಆಡಳಿತ ಮಂಡಳಿ ಒದಗಿಸಬೇಕೆಂದು ವಿವಿಯ ಕುಲಸಚಿವರು ಸುತ್ತೋಲೆಯಲ್ಲಿ ಕಾಲೇಜು ಪ್ರಾಂಶುಪಾಲರಿಗೆ ಸೂಚನೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net