

ವಿನೂತನ ಸ್ಫೂರ್ತಿ ಕಿರಣ ಕಾರ್ಯಕ್ರಮಕ್ಕೆ ಚಾಲನೆ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಜಿ¯್ಲÁಧಿಕಾರಿ ಬಿ.ಫೌಜಿಯಾ ತರನ್ನುಮï, ಜಿಪಂ ಸಿಇಒ ಭಂವರ್‌ಸಿAಗ ಮೀನಾ, ಪ್ರೊಬೇಷನರಿ ಐಎಎಸ್ ಅಧಿಕಾರಿ ಗಜಾನನ ಬಾಳೆ ಹಾಗೂ ಆಹಾರ ಇಲಾಖೆ ಉಪನಿರ್ದೇಶಕ ಶಾಂತಗೌಡ ಗುಣಕಿ ಮೊದಲಾದವರು ಗುರುವಾರ ತಮ್ಮ ಕೆಲಸದ ನಡುವೆಯೇ ಶಿಕ್ಷಕರಾಗಿ ಕಾರ್ಯನಿರ್ವಹಿಸುವ ಮೂಲಕ ವಿದ್ಯಾಥ್ಗಿಳಿಗೆ ಸ್ಪೂರ್ತಿ ತುಂಬುವ ಕೆಲಸ ಮಾಡಿದರು.
ವಿವಿಧ ಕಾಲೇಜುಗಳಿಗೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಒಂದು ಗಂಟೆ ಕಾಲ ಸಂವಾದ ನಡೆಸಿದರು. ಮಕ್ಕಳ ಸಮಸ್ಯೆ ಆಲಿಸಿದಲ್ಲದೆ ಅವರಿಗೆ ಜೀವನದಲ್ಲಿ ಅಂದುಕೊAಡ ಗುರಿ ಸಾಧನೆ ಮಾಡುವ ಕುರಿತು ನೀತಿ ಪಾಠ ಬೋಧಿಸಿದರು. ಈ ಮೂಲಕ ವಿದ್ಯಾರ್ಥಿಗಳು ಸಾಧನೆ ಮಾಡುವ ಅಧಿಕಾರಿಗಳಾಗಲು ಪ್ರೇರಣೆ ನೀಡಿದರು.
ಶಾಲಾ-ಕಾಲೇಜು ಮಕ್ಕಳು ವ್ಯಕ್ತಿತ್ವ ವಿಕಸನ, ಕೌಶಲ್ಯ ಸುಧಾರಣೆ, ಆತ್ಮ ವಿಶ್ವಾಸ ಹೆಚ್ಚಿಸುವಿಕೆ, ಉತ್ತಮ ನಡವಳಿಕೆ, ಪರಿಣಾಮಕಾರಿ ಸಂವಹನ ಕೌಶಲ ಬೆಳಸಲು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರು `ಸ್ಫೂರ್ತಿ ಕಿರಣ' ಕಾರ್ಯಕ್ರಮದ ಅಂಗವಾಗಿ ವಾರದಲ್ಲಿ ಒಂದು ಹಿರಿಯ ಅಧಿಕಾರಿಗಳು ದಿನ ಶಾಲೆ-ಕಾಲೇಜಿಗೆ ಭೇಟಿ ನೀಡಿ ಮಕ್ಕಳೊಂದಿಗೆ ಬೆರೆತು ಅವರಿಗೆ ಪ್ರೇರಕರಾಗುವಂತ ಕೆಲಸ ಮಾಡುತ್ತಿರುವುದು ವಿಶೇಷ,.
ನಗರದ ಹಳೆಯ ಎಸ್‌ಪಿ ಕಚೇರಿ ಎದುರುಗಡೆಯ ಸರ್ಕಾರಿ ಪದವಿ ಪೂರ್ವ ಮಹಿಳಾ ಕಾಲೇಜಿಗೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಭೇಟಿ ನೀಡಿ, ವಿದ್ಯಾರ್ಥಿನಿಯರ ಜತೆಗೆ ಬೆರೆತರು. ಕೆಲ ಹೊತ್ತು ಮಾತುಕತೆ ನಡೆಸಿದರು. ಜೀವನದ ಗುರಿ ಸಾಧನೆ ಕಡೆಗೆ ಲP್ಷÀ್ಯ ಇರಬೇಕೆಂದು ತಿಳಿ ಹೇಳಿದರು. ಅವರು ಸಾಗಿ ಬಂದ ಹಾದಿ ಕುರಿತು ವಿವರಿಸಿದರು. ಅವರೊಂದಿಗೆ ಸೇಲ್ಫಿ ಕ್ಲಿಕ್ಕಿಸಿಕೊಂಡರು.
ಜಿಪA ಸಿಇಒ ಭಂವರಸಿAಗ ಮೀನಾ ಅವರು ಕಮಲಾಪುರ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದರು.ಕಾಲೇಜು ಭೇಟಿ ನೆನಪಿಗಾಗಿ ಆವರಣದಲ್ಲಿ ಸಸಿ ನೆಟ್ಟರು.
ನಗರದ ಮುಕ್ತಾಂಬಿಕಾ ಪಿಯು ಕಾಲೇಜು ಮತ್ತು ಮಿಲಿಂದ್ ಕಾಲೇಜಿಗೆ ಪ್ರೊಬೇಷನರಿ ಐಎಎಸ್ ಅಧಿಕಾರಿ ಗಜಾನನ ಬಾಲೆ ಭೇಟಿ ನೀಡಿ ಪಾಠ ಮಾಡಿದರು. ಏನಾಗಬೇಕು ಎಂಬ ಯೋಚನೆ ಈಗಲೇ ಹಾಕಿಕೊಂಡು ಅದರಂತೆ ಸಾಗಬೇಕು. ಭವಿಷ್ಯದ ೧೦ ವರ್ಷದಲ್ಲಿ ಏನಾಗಬೇಕು ಎಂದುಕೊAಡಿದ್ದೀರೂ ಅದಕ್ಕೆ ಇಂದಿನಿAದಲೇ ಸಿದ್ಧತೆ ಮಾಡಿಕೊಳ್ಳಿ ಎಂದು ಕರೆ ನೀಡಿದರು.
ಆಹಾರ, ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಶಾಂತಗೌಡ ಗುಣಕಿ ಅವರು ಗುರು ನಾಗಲಿಂಗೇಶ್ವರ ಪದವಿ ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ತಮ್ಮ ವಿಚಾರಗಳನ್ನು ಹಂಚಿಕೊAಡರು.
==