ಕಾಲೇಜಿಗೆ ಅಗತ್ಯ ಸೌಲಭ್ಯ ಒದಗಿಸುವೆ

ydg6
Published on

ಗುರುಮಠಕಲ್: ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯ ತಾಲೂಕು ಮಟ್ಟದಲ್ಲಿ ನ್ಯಾಕ್-ಬಿಪ್ಲಸ್ ಪಡೆದ ಏಕೈಕ ಕಾಲೇಜು ಎಂದರೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಗಿದ್ದು, ಇದಕ್ಕೆ ಬೇಕಾದ ಅಗತ್ಯ ಸೌಲಭ್ಯವನ್ನು ನಾನು ಒದಗಿಸಲು ಸಿದ್ಧ ಎಂದು ಶಾಸಕ ಶರಣಗೌಡ ಕಂದಕೂರ ಹೇಳಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಕರೆದಿದ್ದ ಕಾಲೇಜು ಅಭಿವೃದ್ಧಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ತಂದೆ ಅವರು ಶಾಸಕರಾಗಿದ್ದಾಗ ಕೆಕೆಆರ್‌ಡಿಬಿಯಿಂದ 4 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿತ್ತು. ಕಾಲೇಜಿಗೆ ನ್ಯಾಕ್ ಸಮಿತಿ ಬಿ-ಪ್ಲಸ್ ಶ್ರೇಣಿಗಾಗಿ ಅಗತ್ಯವಾದ ವಿವಿಧ ಸೌಲಭ್ಯ ಒದಗಿಸಲಾಗಿತ್ತು ಎಂದು ಹೇಳಿದರು.

ವಿಜ್ಞಾನ ವಿಭಾಗದ ಕಟ್ಟಡಕ್ಕೆ ವಿದ್ಯುತ್ ಸಂಪರ್ಕದ ಸಮಸ್ಯೆ, ಸಮರ್ಪಕ ನೀರು ಒದಗಿಸುವುದು, ಕಾಲೇಜು ಮುಂಭಾಗದಲ್ಲಿ ಮುರುಂ ಹಾಕುವುದು ಮತ್ತು ಕಾಲೇಜು ಆವರಣದಲ್ಲಿ ಸೂಕ್ತ ಬಂದೋಬಸ್ತ್ನ ಕ್ರಮ ಕೈಗೊಳ್ಳಬೇಕು ಎಂದು ಪ್ರಾಚಾರ್ಯರು ಶಾಸಕರ ಗಮನಕ್ಕೆ ತಂದರು. ತಕ್ಷಣ ಸಂಬAಧಿಸಿದ ಅಧಿಕಾರಿಗಳಿಗೆ ದೂರವಾಣಿ ಮೂಲಕ ಈ ಎಲ್ಲ ಸಮಸ್ಯೆ ಸರಿಪಡಿಸುವಂತೆ ತಾಕೀತು ಮಾಡಿ, ಇನ್ನುಳಿದ ಹೆಚ್ಚಿನ ಸೌಲಭ್ಯವನ್ನು ಅಗತ್ಯವಾಗಿ ಕಲ್ಪಿಸಿಕೊಡುವುದಾಗಿ ಹೇಳಿದರು. ಕಾಲೇಜಿನ ಉಪನ್ಯಾಸಕರ ಕೊರತೆ ಬಗ್ಗೆ ಶಿಕ್ಷಣ ಸಚಿವರೊಂದಿಗೆ ಚರ್ಚಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಸಿಡಿಸಿ ಸದಸ್ಯರಾದ ಜಗದೀಶ ಆವಂಟಿ, ಗುರುನಾಥ ತಲಾರಿ, ಮಸಿಯೂದ್ದೀನ್ ಆಸಿಮ್, ರಾಧಾ ಜ್ಞಾನೇಶ್ವರರೆಡ್ಡಿ, ಜಯಶ್ರೀ ಪಾಟೀಲ್, ನಾಗನಾಥರೆಡ್ಡಿ, ಗುರುಲಿಂಗಯ್ಯ ಮೋಟ್ನಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net