ಕಾಲುಸಂಕ ನಿರ್ಮಾಣಕ್ಕೆ ಒತ್ತು

9sgr2
ಸಾಗರದ ಪ್ರವಾಸಿ ಮಂದಿರದಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಅಭಿನಂದಿಸಿದರು. ಕಲಸೆ ಚಂದ್ರಪ್ಪ, ಚೇತನ್‌ರಾಜ್ ಕಣ್ಣೂರು, ಮಂಜಪ್ಪ ಮರಸ, ಶ್ರೀನಿವಾಸ್ ಇತರರಿದ್ದರು.
Published on

ಸಾಗರ: ಸಾಗರ, ತೀರ್ಥಹಳ್ಳಿ, ಹೊಸನಗರ, ಸೊರಬ ಭಾಗಗಳಲ್ಲಿ ಹೆಚ್ಚಿನ ಮಳೆ ಬೀಳುವ ಕಾರಣ ಸಂಪರ್ಕಕ್ಕೆ ಕಾಲುಸಂಕಗಳ ಅವಶ್ಯಕತೆ ಇದ್ದು, ಹೆಚ್ಚಿನ ಅನುದಾನ ನೀಡಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಸಾಗರದ ಪ್ರವಾಸಿ ಮಂದಿರದಲ್ಲಿ ಕ್ಷೇತ್ರದ ಶಾಸಕ ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸಂಬಂಧಿಸಿ ಪರಿಹಾರ ಕೊಡುವ ಕೆಲಸ ತುರ್ತಾಗಿ ಆಗಬೇಕಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ತುರ್ತು ಕ್ರಮಕ್ಕೆ ಸೂಚಿಸಿದ್ದೇನೆ. ಅತಿವೃಷ್ಟಿಯಿಂದ ಹಾನಿಯಾದ ಪ್ರದೇಶಗಳಲ್ಲಿ ತುರ್ತು ಕಾಮಗಾರಿಗಳನ್ನು ಸಾಗರ ತಾಲೂಕಿನಲ್ಲಿ ವ್ಯವಸ್ಥಿತವಾಗಿ ನಡೆಸಲಾಗಿದೆ. ಇನ್ನು ಹೆಚ್ಚಿನ ಅನುದಾನ ಬೇಕಿದ್ದಲ್ಲಿ ನೀಡುವುದಾಗಿ ಭರವಸೆ ನೀಡಿದರು. ಅವಧಿಯೊಳಗೆ ಪೂರ್ಣಗೊಳಿಸಿ: ಸಾಗರದಲ್ಲಿ 112 ಕೋಟಿ ರೂ. ವೆಚ್ಚದಲ್ಲಿ ಹಸಿರುಮಕ್ಕಿ ಸೇತುವೆ ಕಾಮಗಾರಿ ನಡೆಯುತ್ತಿದೆ. ಸೇತುವೆ ಕಾಮಗಾರಿ ಕುರಿತಂತೆ ಈಗಾಗಲೇ ಎರಡು ಬಾರಿ ವಿಶೇಷ ಸಭೆ ಕೂಡ ನಡೆಸಲಾಗಿದೆ. ಕಾಮಗಾರಿ ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಶೀಘ್ರ ಸೇತುವೆ ಉದ್ಘಾಟಿಸಲಾಗುವುದು ಎಂದರು. ಸಾಗರದ ಲೋಕೋಪಯೋಗಿ ಸಹಾಯಕ ಕಾರ್ಯಪಾಲಕ ಅಭಿಯಂತ ಅನಿಲ್, ಕಲಸೆ ಚಂದ್ರಪ್ಪ, ಚೇತನ್‌ರಾಜ್ ಕಣ್ಣೂರ್, ಮಂಜಪ್ಪ ಮರಸ, ಶ್ರೀನಿವಾಸ್, ಟಿ.ಪಿ.ರಮೇಶ್ ಇತರರಿದ್ದರು.

ಸಾಗರ ತಾಲೂಕಿನಲ್ಲಿ 226 ಕಾಲುಸಂಕಗಳಿಗೆ ಪ್ರಸ್ತಾವನೆ ನೀಡಲಾಗಿದೆ. ತುರ್ತಾಗಿ ಕೆಲ ಕಾಲುಸಂಕಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಸರ್ಕಾರದ ಲೋಕೋಪಯೋಗಿ ಇಲಾಖೆ ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಮುಕ್ತಾಯಗೊಳ್ಳಬೇಕು. ಗುಣಮಟ್ಟ ಕಾಪಾಡಿಕೊಳ್ಳಬೇಕು. ಯಾವ ಕಾರಣಕ್ಕೂ ವಿಳಂಬವಾಗದಂತೆ ಗಮನಿಸಬೇಕು. ಸತೀಶ್ ಜಾರಕಿಹೊಳಿ, ಲೋಕೋಪಯೋಗಿ ಸಚಿವ ಆಡಳಿತ ಸೌಧಕ್ಕೆ 4 ಕೋಟಿ ರೂ. ಲೋಕೋಪಯೋಗಿ ಸಚಿವರು ಮನವಿಗೆ ಪೂರಕವಾಗಿ ಸ್ಪಂದಿಸಿ ಸಾಗರ ವಿಧಾನಸಭಾ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು. 20 ಕೋಟಿ ರೂ. ವೆಚ್ಚದಲ್ಲಿ ರಾಜ್ಯ ರಸ್ತೆ ಮತ್ತು ಜಿಲ್ಲಾ ರಸ್ತೆಗಳ ಡಾಂಬರೀಕರಣ ನಡೆಯುತ್ತಿದೆ. ಎಸ್‌ಎಚ್‌ಡಿಬಿ ಯೋಜನೆಯಡಿ 30 ಕೋಟಿ ರೂ. ಹಣ ಬಿಡುಗಡೆಯಾಗಿದ್ದು, ಎಡೆಹಳ್ಳಿ, ರಿಪ್ಪನ್‌ಪೇಟೆ ರಸ್ತೆಗೆ 20 ಕೋಟಿ ರೂ., ಸಾಗರ ಪಟ್ಟಣದ ರಾಮನಗರ ಮತ್ತು ಕೆಳದಿ ರಸ್ತೆಗೆ 11 ಕೋಟಿ ರೂ. ಅನುದಾನ ಬಂದಿದೆ. ಸಿಆರ್‌ಎ್ಎ್ ಯೋಜನೆಯಲ್ಲಿ ಸೀತಾಕಟ್ಟೆಯಿಂದ ಕಾರ್ಗಲ್ ಗಡಿಯವರೆಗೆ 6 ಕೋಟಿ ರೂ. ಅನುದಾನದಲ್ಲಿ ಕಾಮಗಾರಿಗಳು ನಡೆಯುತ್ತಿವೆ. ಸಾಗರ ತಾಲೂಕಿನ ಆಡಳಿತ ಸೌಧಕ್ಕೆ 4 ಕೋಟಿ ರೂ. ಹೆಚ್ಚುವರಿಯಾಗಿ ಬಿಡುಗಡೆಯಾಗಿದ್ದು, 50 ಲಕ್ಷ ರೂ.ಗಳನ್ನು ಪೀಠೋಪಕರಣಗಳಿಗೆ ತೆಗೆದಿರಿಸಲಾಗಿದೆ ಎಂದು ತಿಳಿಸಿದರು. ಸಾಗರ ಕ್ಷೇತ್ರದಲ್ಲಿ ಪ್ರಸ್ತುತ ಹಲವು ಯೋಜನೆಗಳಿಗೆ ಲೋಕೋಪಯೋಗಿ ಸಚಿವರಲ್ಲಿ ಅನುದಾನ ಕೋರಿದ್ದು, ಸಾಗರ ಪಟ್ಟಣದ ಹೆಚ್ಚುವರಿ ವಸತಿ ಗೃಹಗಳ ನಿರ್ಮಾಣಕ್ಕೆ 4 ಕೋಟಿ ರೂ., ರಾಣಿ ಚನ್ನಮ್ಮ ವೃತ್ತದಿಂದ ಶ್ರೀಗಂಧದ ಸಂಕೀರ್ಣದವರೆಗೆ ಕಾಮಗಾರಿಗೆ ಅನುದಾನ, ಮಾರುಕಟ್ಟೆ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿ ಬಾಕಿ ಇರುವ ಪರಿಹಾರ ಹಣ ಬಿಡುಗಡೆಗೆ ಮನವಿ ಮಾಡಿದ್ದೇವೆ. ಸಾಗರ ಮತ್ತು ಹೊಸನಗರ ಕ್ಷೇತ್ರದ ಅಭಿವೃದ್ಧಿಗೆ ಕೆಲ ಪ್ರಸ್ತಾವನೆ ನೀಡಲಾಗಿದೆ. ಗೋಪಾಲಕೃಷ್ಣ ಬೇಳೂರು, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net