

ವಿಜಯಪುರ: ಕಾಲುವೆಗೆ ಬಿದ್ದ ಬಾಲಕನನ್ನು ರಕ್ಷಿಸಲು ಹೋದ ವೇಳೆ ಮಗ ಹಾಗೂ ತಾಯಿ ಇಬ್ಬರೂ ಸಹ ಕಾಲುವೆ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಿಡಗುಂದಿ ತಾಂಡಾ ಬಳಿ ಇರುವ ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಯಲ್ಲಿ ನಡೆದಿದೆ. ನಿಡಗುಂದಿಯ ನಿವಾಸಿಗಳಾದ ಎಂಟು ವರ್ಷದ ಬಾಲಕ ನಾಗೇಶ ಹಾಗೂ ತಾಯಿ ಅಂಜನಾ ಕೊಂಚಿಕೊರವರ(೨೮) ಮೃತ ದುರ್ದೈವಿಗಳಾಗಿದ್ದಾರೆ. ಇಂದು ಮದ್ಯಾಹ್ನ ಬಟ್ಟೆ ತೊಳೆಯಲು ತಾಯಿಯೊಂದಿಗೆ ಕಾಲುವೆ ಬಳಿ ಬಂದಿದ್ದ ವೇಳೆ ಅವಘಡ ಜರುಗಿದೆ. ತಾಯಿ ಹಾಗೂ ಮಗುವಿನ ಶವವನ್ನು ಸ್ಥಳೀಯರು ಹೊರ ತೆಗೆದಿದ್ದಾರೆ. ನಿಡಗುಂದಿ ಪೊಲೀಸ್ ಠಾಣೆ ವ್ಯಾಪ್ತಿ ಘಟನೆ ನಡೆದಿದೆ.