ಕಾಲುವೆಗೆ ನೀರು ಹರಿಸಲು ಪ್ರಯತ್ನ

30..3
ಬೆನಕಟ್ಟಿ ಗ್ರಾಮದ ಶ್ರೀ ದುರ್ಗಾದೇವಿ ದೇವಸ್ಥಾನದ ಸಭಾಭವನದಲ್ಲಿ ಶಾಸಕ ವಿಶ್ವಾಸ ವೈದ್ಯ ಅವರನ್ನು ಈಚೆಗೆ ಸನ್ಮಾನಿಸಲಾಯಿತು. ಕೀರಪ್ಪ ಹದ್ದನ್ನವರ, ಮಹಾಂತೇಶ ಬಿಷ್ಟಣ್ಣವರ ಇತರರು ಇದ್ದರು.
Published on

ಮುನವಳ್ಳಿ: ಸವದತ್ತಿ ಕ್ಷೇತ್ರವನ್ನು ಮಾದರಿ ಮಾಡಲು ಪ್ರಯತ್ನಿಸಲಾಗುವುದು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.


ಸಮೀಪದ ಬೆನಕಟ್ಟಿ ಗ್ರಾಮಸ್ಥರು ಈಚೆಗೆ ಹಮ್ಮಿಕೊಂಡಿದ್ದ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿ, ಮುಂಬರುವ ದಿನಗಳಲ್ಲಿ ಬೆನಕಟ್ಟಿ ಗ್ರಾಮದ ಸರ್ವಾಂಗೀಣ ಅಭಿವೃದ್ಧಿ ಕೈಗೊಳ್ಳಲಾಗುವುದು ಎಂದರು. ಬೆನಕಟ್ಟಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರ ಜಮೀನುಗಳಿಗೆ ಮಲಪ್ರಭಾ ಎಡದಂಡೆ ಕಾಲುವೆ ನೀರು ಹರಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.


ಮೆರವಣಿಗೆ ಮೂಲಕ ಶಾಸಕರನ್ನು ಸ್ವಾಗತಿಸಲಾಯಿತು. ಮಾಜಿ ಜಿಪಂ ಸದಸ್ಯ ಕೀರಪ್ಪ ಹದ್ದನ್ನವರ, ಮಹಾಂತೇಶ ಬಿಷ್ಟಣ್ಣವರ, ರುದ್ರಪ್ಪ ರೇವನ್ನವರ, ಮಹಾಂತೇಶ ಉಪ್ಪಿನ, ರುದ್ರಪ್ಪ ಲಕ್ಕಪ್ಪನವರ, ಶ್ರೀಶೈಲ ಕುಸಲಿ, ಪ್ರಕಾಶ ಸಾವಳಗಿ, ಪಂಚಪ್ಪ ಕುಸಲಿ, ಬಿ.ಆರ್. ಮರ್ಚಪ್ಪನ್ನವರ, ಪಿ.ಕೆ. ಮರ್ದನ್ನವರ, ಗದಿಗೆಪ್ಪ ವೀರಶೆಟ್ಟಿ, ಅಡಿವೆಪ್ಪ ವೀರಶೆಟ್ಟಿ, ಉಮೇಶ ಸಾವಳಗಿ, ಗಿರೀಶ ಜಕಬಾಳ, ಮಲ್ಲಿಕಾರ್ಜುನ ಲಕ್ಕಪ್ಪನ್ನವರ, ಭೀರಪ್ಪ ದೇವರಮನಿ, ಮರೆಪ್ಪ ಹೊರಟ್ಟಿ, ಶಿವಾನಂದ ಮಳಗಲಿ, ರುದ್ರಪ್ಪ ಬಡಿಗೇರ, ಭೀಮಪ್ಪ ಹೊನಕುಪ್ಪಿ, ಯಲ್ಲಪ್ಪ ನಂದಿ, ಯಲ್ಲಪ್ಪ ಬೆನಕಟ್ಟಿ, ಈರಪ್ಪ ಬಿಷ್ಟಣ್ಣವರ, ಪತ್ರೆಪ್ಪ ಜಲಗೇರಿ, ಮುತ್ತಪ್ಪ ನಾಯ್ಕರ, ಕಲ್ಲಪ್ಪ ಗುಡಮಕೇರಿ ಇತರರಿದ್ದರು.
ಶಿಕ್ಷಕ ಎಂ ಎನ್. ನರಗುಂದ ನಿರೂಪಿಸಿದರು. ಎಂ.ಎಂ. ಲಕ್ಕಣ್ಣವರ ಸ್ವಾಗತಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net